ಕಾರವಾರದ ಬಳಿ ಅಕ್ಕಿ ಒಯ್ಯುತ್ತಿದ್ದ ಲಾರಿಯಿಂದ ನೆಲಕ್ಕೆ ಬಿದ್ದ ಚಾಲಕ ಸಾವನಪ್ಪಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.
ತೆಲಂಗಾಣದ ಬೊಡ್ಡುಪಳ್ಳಿ ಯಾದಗಿರಿ (45) ಎಂಬಾತರು ತಮ್ಮ ಲಾರಿಗೆ ವಿ ನಾಗರಾಜು ಎಂಬಾತರನ್ನು ಕ್ಲೀನರ್ ಆಗಿ ನೇಮಿಸಿದ್ದರು. ಬೊಡ್ಡುಪಳ್ಳಿ ಯಾದಗಿರಿ ಅವರು ಕ್ಲೀನರ್ ಜೊತೆ ಸೇರಿ ಆ ಲಾರಿಯಲ್ಲಿ ಮೀರಯಲ್ಲಗುಡ್ಡದಿಂದ ಗೋವಾಗೆ ಅಕ್ಕಿ ಸಾಗಿಸುತ್ತಿದ್ದರು. ಮಾರ್ಚ 29ರಂದು ಕಾರವಾರ ತಲುಪಿದ ಲಾರಿ ಸಂಕ್ರುಭಾಗದ ಘಟ್ಟ ಪ್ರದೇಶದಲ್ಲಿ ಬಿಸಿಯಾಯಿತು. ಹೀಗಾಗಿ ಆ ಲಾರಿಯನ್ನು ಬೊಡ್ಡುಪಳ್ಳಿ ಯಾದಗಿರಿ ರಸ್ತೆ ಅಂಚಿನಲ್ಲಿ ನಿಲ್ಲಿಸಿದರು.
ಈ ವೇಳೆ ಲಾರಿ ಮೇಲೆರಿದ ಅವರು ಅಕ್ಕಿ ಮೂಟೆ ಸರಿಪಡಿಸುತ್ತಿದ್ದರು. ಮೂಟೆಗೆ ಕಟ್ಟಿದ್ದ ಹಗ್ಗ ಬಿಗು ಮಾಡುವಾಗ ಕಾಲು ಜಾರಿ ನೆಲಕ್ಕೆ ಬಿದ್ದರು. ಆಗ, ಕ್ಲೀನರ್ ನಾಗರಾಜ್ ಅವರಿಗೆ ನೀರು ಕುಡಿಸಿದರು. ಆದರೆ, ನೀರು ಕುಡಿಯುವ ಪರಿಸ್ಥಿತಿಯಲ್ಲಿ ಬೊಡ್ಡುಪಳ್ಳಿ ಯಾದಗಿರಿ ಇರಲಿಲ್ಲ. ಹೀಗಾಗಿ ಆಂಬುಲೆನ್ಸಿಗೆ ಫೋನ್ ಮಾಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಅಲ್ಲಿನ ವೈದ್ಯರು ಬೊಡ್ಡುಪಳ್ಳಿ ಯಾದಗಿರಿ ಅವರು ಸಾವನಪ್ಪಿದ ಬಗ್ಗೆ ಘೋಷಸಿದರು. ಅವರ ಪುತ್ರ ಬೊಡುಪಳ್ಳಿ ಬಿಲ್ವಂತ್ ಪೊಲೀಸರಿಗೆ ಮಾಹಿತಿ ನೀಡಿದರು. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದರು.