ಕಾರವಾರದ ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರಿ ಮ್ಯಾನೇಜರ್ ಮನೆಯಲ್ಲಿ ಕಳ್ಳತನ ನಡೆದಿದೆ.
ಇಂಡಸ್ಟ್ರಿಯಲ್ಲಿ ಲ್ಯಾಬ್ ಮ್ಯಾನೆಜರ್ ಆಗಿರುವ ನರಸಿಂಗ್ ಆಚಾರಿ ಬಂಗಾರದ ಆಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಮಾರ್ಚ 26ರಿಂದ ಅವರು ಮನೆಯಲ್ಲಿರಲಿಲ್ಲ. ಈ ವೇಳೆಯಲ್ಲಿಯೇ ಮ್ಯಾನೇಜರ್ ಮನೆಗೆ ಗುರಿ ಹಾಕಿ ಕಳ್ಳತನ ನಡೆದಿದೆ.
ಸೋಮವಾರ ಅವರು ಮನೆಗೆ ಬಂದು ನೋಡಿದಾಗ ಅಲ್ಲಿನ ವಸ್ತುಗಳೆಲ್ಲವೂ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸಿದೆ. ಒಳಗೆ ಹೋಗಿ ಪರಿಶೀಲನೆ ಮಾಡಿದಾಗ 85 ಸಾವಿರ ಮೌಲ್ಯದ ಬಂಗಾರದ ಚೈನ್ ಕಾಣೆಯಾಗಿರುವುದು ಗೊತ್ತಾಗಿದೆ.
ಇನ್ನಷ್ಟು ತಡಕಾಟ ನಡೆಸಿದಾಗ 30 ಸಾವಿರ ಮೌಲ್ಯದ ಉಂಗುರ, 15 ಸಾವಿರ ಮೌಲ್ಯದ ಕಿವಿಯೋಲೆ, ಲ್ಯಾಪ್‌ಟಾಪ್, ವಾಟರ ಫಿಲ್ಟರ್ ಸಹ ಕಳ್ಳ ದೋಚಿರುವುದು ಅರಿವಿಗೆ ಬಂದಿದೆ. ಅಂದಾಜು 1,43,200 ರೂ. ಮೌಲ್ಯದ ಸ್ವತ್ತುಗಳು ಕಳ್ಳತನವಾಗಿರುವ ಬಗ್ಗೆ ನರಸಿಂಗ್ ಆಚಾರಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್‌ಐ ಮಂಜುನಾಥ ಪಾಟೀಲ್ ಅವರು ಕಳ್ಳನ ಹುಡುಕಾಟ ನಡೆಸುತ್ತಿದ್ದಾರೆ.