6

ಅಮಾಯಕರ ವಿರುದ್ಧ ಕೂಗಾಟ.. ಪೊಲೀಸ್ ಠಾಣೆಯಲ್ಲಿಯೂ ರಂಪಾಟ: ಕೊನೆಗೂ ಜೈಲು ಸೇರಿದ ಭೂಪ!

ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್’ರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಬಂಧನದ ವೇಳೆಯೂ ಪ್ರವೀಣ ಸುಧೀರ್ ಸಾಕಷ್ಟು ರಂಪಾಟ ನಡೆಸಿದ್ದು, ಬಂಧನಕ್ಕೆ ತೆರಳಿದವರಿಗೆ ಬೆದರಿಕೆ ಒಡ್ಡಿದ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ರಾಮನಗರದ ಪ್ರವೀಣ ಸುಧೀರ್ ಅವರು ಮಾರ್ಚ 9ರ ರಾತ್ರಿ ಶುಭಂ ಉತ್ತರೆ ಎಂಬಾತರ ಬಳಿ `ಸರಾಯಿ ಕುಡಿಸು’ ಎಂದು ಕಾಡಿಸಿದ್ದರು. ಸರಾಯಿ ಕೊಡಿಸದ ಕಾರಣ ಶುಭಂ ಅವರ ಮನೆಗೆ ನುಗ್ಗಿ ಕೂಗಾಡಿದ್ದರು. ಶುಭಂ ಅವರ ತಾಯಿ ಬಳಿ `ನಿನ್ನ ಮಗನಿಗಾಗಿ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿದ್ದೇನೆ’ ಎಂದಿದ್ದರು. ಇದಕ್ಕೆ ವಿರೋಧವ್ಯಕ್ತಪಡಿಸಿದ ಶುಭಂ ಅವರ ಕೆನ್ನೆಗೆ ಬಾರಿಸಿದ್ದರು. ಹೊಡೆದಾಟ ತಡೆಯಲು ಆಗಮಿಸಿದ ಶುಭಂ ಅವರ ಸಹೋದರಿ ಸಾಕ್ಷಿ ಅವರ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರು. ಕೊನೆಗೆ ಮನೆ ಅಂಗಳದಲ್ಲಿದ್ದ ಬೈಕನ್ನು ಅಪಹರಿಸಿಕೊಂಡು ಹೋಗಿದ್ದರು.

ಹೋಗವ ಮುನ್ನ `ನನ್ನ ವಿರುದ್ಧ ಸಾಕಷ್ಟು ದೂರುಗಳಿವೆ. ಪೊಲೀಸರಿಂದ ಸಹ ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿ ಬೆದರಿಸಿದ್ದರು. ಶುಭಂ ಪತ್ತಾರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ ತನಿಖೆ ನಡೆಸಿದ ಪೊಲೀಸರು ಪ್ರವೀಣ ಸುಧೀರ್ ವಿಚಾರಣೆಗೆ ತೆರಳಿದ್ದರು. ಜೊಯಿಡಾ ರಾಮಲಿಂಗಗಲ್ಲಿಯಲ್ಲಿದ್ದ ಪ್ರವೀಣ ಸುಧೀರ್ ನೋಟಿಸ್ಸು ಸ್ವೀಕರಿಸಲು ಸಹ ಬಾಗಿಲು ತೆರೆದಿರಲಿಲ್ಲ. ಅಲ್ಲಿನ ಬೀಟ್ ಸಿಬ್ಬಂದಿ ರಾಜು ಚಲವಾದಿ ಅವರನ್ನು ಆ ವೇಳೆ ಪ್ರವೀಣ ಸುಧೀರ್ ನಿಂದಿಸಿದ್ದರು.

ಅದಾದ ನಂತರ ಮಾರ್ಚ 31ರಂದು ಪೊಲೀಸ್ ಸಿಬ್ಬಂದಿ ಸಿಬ್ಬಂದಿ ರಾಜು ಚಲವಾದಿ, ಸದಾಶಿವ ಮಠಪತಿ ಅವರ ಜೊತೆ ಪಿಎಸ್‌ಐ ಬಸವರಾಜ ಮಬನೂರು ಸಹ ಪ್ರವೀಣ ಅವರ ಬಂಧನಕ್ಕೆ ತೆರಳಿದ್ದರು. ಆಗಲೂ, ಪ್ರವೀಣ ಸುಧೀರ್ ಮನೆ ಬಾಗಿಲು ತೆರೆಯದೇ ಪ್ರತಿರೋಧವ್ಯಕ್ತಪಡಿಸಿದರು. ಅದಾಗಿಯೂ, ಪೊಲೀಸರು ಪ್ರವೀಣ ಸುಧೀರರನ್ನು ವಶಕ್ಕೆಪಡೆದರು. ರಾಮಲಿಂಗೇಶ್ವರ ದೇವಸ್ಥಾನ ಎದುರು ನಡೆದುಬರುವಾಗ `ನಮ್ಮ ಏರಿಯಾ ಬೀಟಿಗೆ ಈ ಹೊಲೆಯರನ್ನು ನೇಮಿಸಿದ್ದಾರೆ. ನನ್ನನ್ನು ಮುಟ್ಟಬೇಡ’ ಎಂದು ಪ್ರವೀಣ ಸುಧೀರ್ ಕೂಗಾಡಿದರು. ರಾಜು ಚಲವಾದಿ ಅವರ ಜಾತಿಯನ್ನು ಹಿಯಾಳಿಸಿದರು. ರಾಜು ಚಲವಾದಿ ಅವರು ಕೈ ಹಿಡಿಯಲು ಯತ್ನಿಸಿದಾಗ ಬಲಗೈ ತಿರುಚಿದರು. ಸದಾಶಿವ ಮಠಪತಿ ಅವರ ಎದೆಗೆ ತಿವಿದು ನೋವುಂಟು ಮಾಡಿದರು.

ಪೊಲೀಸ್ ಠಾಣೆಗೆ ಬಂದ ನಂತರವೂ ಅಲ್ಲಿ ಪ್ರವೀಣ ಸುಧೀರ್ ಕೂಗಾಡಿದರು. `ರಾಮನಗರದಲ್ಲಿ ಹೇಗೆ ಡ್ಯೂಟಿ ಮಾಡುತ್ತೀರಿ? ನೋಡುತ್ತೇನೆ’ ಎನ್ನುತ್ತ ಬೆದರಿಸಿದರು. ಆ ಬೆದರಿಕೆಗೆ ಬಗ್ಗದೇ ಪೊಲೀಸರು ಪ್ರವೀಣ ಸುಧೀರ’ರನ್ನು ಜೈಲಿಗೆ ಕಳುಹಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page