ಕಾರವಾರದ ಲಕ್ಷ್ಮಣ ಅಂಬಿಗ ಅರಬ್ಬಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅವರು ಮೀನು ಹಿಡಿಯುವ ವೇಳೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕಾರವಾರದ ಚಿತ್ತಾಕುಲದ ಸೀಬರ್ಡ ಕಾಲೋನಿಯಲ್ಲಿ ಲಕ್ಷ್ಮಣ ಗೋವಿಂದ ಅಂಬಿಗ (50) ವಾಸವಾಗಿದ್ದರು. ನಿತ್ಯ ಬೆಳಗಾದರೆ ಅವರು ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ತೆರಳುತ್ತಿದ್ದರು. ಸಂಜೆ ಒಂದಷ್ಟು ಮೀನುಗಳನ್ನು ಮನೆಗೆ ತರುತ್ತಿದ್ದರು. ಅದರಂತೆ ಮಾರ್ಚ 31ರಂದು ಸಹ ಅವರು ಎಂದಿನoತೆ ಮೀನುಗಾರಿಕೆಗೆ ತೆರಳಿದ್ದರು. ಆದರೆ, ಆ ದಿನ ಸಂಜೆ ಸಹಜ ಸ್ಥಿತಿಯಲ್ಲಿ ಮನೆಗೆ ಮರಳಲಿಲ್ಲ.
ಬೈತಖೋಲ್ ಬಳಿ ಮೀನುಗಾರಿಕೆ ಮಾಡುವಾಗ ಅವರು ಕಾಲು ಜಾರಿ ಸಮುದ್ರಕ್ಕೆ ಬಿದ್ದರು. ಬಲೆ ಎಳೆಯುವ ಅವಧಿಯಲ್ಲಿ ಈ ಅವಘಡ ನಡೆದಿದ್ದು, ಸಮುದ್ರದ ನೀರು ಅವರ ಉಸಿರುಗಟ್ಟಿಸಿತು. ಅದೇ ನೀರಿನಲ್ಲಿ ಮುಳುಗಿ ಅವರು ಸಾವನಪ್ಪಿದರು. ಮಾರ್ಚ 1ರಂದು ಕಾರವಾರದ ಬೈತಕೋಲ್ ಬ್ರೆಕ್ ವಾಟರ್ ಬಳಿ ಲಕ್ಷ್ಮಣ ಅಂಬಿಗ ಅವರ ಶವ ಸಿಕ್ಕಿತು.
ವಿಷಯ ಅರಿತ ಅವರ ಮಗ ಶ್ರೀನಿವಾಸ ಅಂಬಿಗ ಸ್ಥಳಕ್ಕೆ ಧಾವಿಸಿದರು. ತಂದೆಯ ನಿಧನವನ್ನು ಖಚಿತಪಡಿಸಿಕೊಂಡು ಪೊಲೀಸ್ ಪ್ರಕರಣ ದಾಖಲಿಸಿದರು. ಅದಾದ ನಂತರ ಆಸ್ಪತ್ರೆಯಿಂದ ಶವ ಬಿಡಿಸಿಕೊಂಡರು.