ಶಿರಸಿ ನಗರ ಪೊಲೀಸ ಠಾಣೆಯ ಪಿಎಸ್‌ಐ ನಾಗಪ್ಪ ಬಿ ಅವರು ಮುಖ್ಯಮಂತ್ರಿಗಳಿOದ ಬಂಗಾರ ಪದಕ ಸ್ವೀಕರಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅವರು ಸಲ್ಲಿಸಿದ ಉತ್ತಮ ಸೇವೆ ಗಮನಿಸಿ ಸರ್ಕಾರ ಈ ಪುರಸ್ಕಾರ ನೀಡಿದೆ.
ನಾಗಪ್ಪ ಅವರು ರಾಯಚೂರು ಜಿಲ್ಲೆಯ ಮಸ್ಕಿ ಮೂಲದವರು. ಕಲಬುರಗಿಯಲ್ಲಿ ಪಿಎಸ್‌ಐ ಆಗಿ ನಿಯೋಜನೆಯಾದ ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಅವರು ಕರ್ತವ್ಯ ನಿಭಾಯಿಸಿದ್ದಾರೆ. ದಾಂಡೇಲಿ, ಕಾರವಾರದಲ್ಲಿಯೂ ಅವರು ಉತ್ತಮ ರೀತಿ ಸೇವೆ ಸಲ್ಲಿಸಿದ್ದಾರೆ. 2022ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅವರು ಆಯ್ಕೆಯಾಗಿದ್ದು, ಬುಧವಾರ ಅದನ್ನು ಪ್ರದಾನ ಮಾಡಲಾಗಿದೆ.
ನಾಗಪ್ಪ ಅವರು ಸಾಹಿತ್ಯ ವಿಷಯದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದಾರೆ. ಜನ ಜಾಗೃತಿ ಮೂಡಿಸುವ ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ಶಿರಸಿಯ `ಲೋಕಧ್ವನಿ’ ಪತ್ರಿಕೆಯಲ್ಲಿ ವಾರಕ್ಕೆ ಒಂದು ಪೊಲೀಸ್ ಸ್ಟೋರಿ ಎಂಬ ಅಡಿಬರಹದ ಅಡಿ `ಆರಕ್ಷಕ ಕಂಡ ಕಥನ’ ಎಂಬ ಅಂಕಣವನ್ನು ಅವರು ಬರೆಯುತ್ತಾರೆ. ಕವಿಯಾಗಿಯೂ ಗುರುತಿಸಿಕೊಂಡಿರುವ ನಾಗಪ್ಪ ಅವರು ಪುಸ್ತಕವನ್ನು ಬರೆದಿದ್ದಾರೆ. ಜೊತೆಗೆ ಜನಸ್ನೇಹಿ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ.