6
  • Latest
Halakki scandal A foreign puppet who stepped with a puppet!

ಹಾಲಕ್ಕಿ ಹಗರಣ: ಬೊಂಬೆ ಜೊತೆ ಹೆಜ್ಜೆ ಹಾಕಿದ ವಿದೇಶಿ ಬೊಂಬೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಹಾಲಕ್ಕಿ ಹಗರಣ: ಬೊಂಬೆ ಜೊತೆ ಹೆಜ್ಜೆ ಹಾಕಿದ ವಿದೇಶಿ ಬೊಂಬೆ!

AchyutKumar by AchyutKumar
in ಲೇಖನ
Halakki scandal A foreign puppet who stepped with a puppet!

ಬ್ರಿಟೀಷರ ದಬ್ಬಾಳಿಕೆ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ ಹಾಗೂ ಆಡಳಿತದಲ್ಲಿನ ಅಂಕು-ಡೊoಕುಗಳ ಬಗ್ಗೆ ಅಧಿಕಾರದಲ್ಲಿರುವವರಿಗೆ ಅರಿವು ಮೂಡಿಸುವುದಕ್ಕಾಗಿ ಹಾಲಕ್ಕಿ ಸಮುದಾಯದವರು ಕಂಡುಕೊoಡಿದ್ದ ದಾರಿ `ಹಗರಣ’

ADVERTISEMENT

ಪರಕೀಯರ ಭಾಷೆ ಬಾರದ ಹಾಲಕ್ಕಿ ಜನ `ಹಗರಣ’ದ ಮೂಲಕ ಸಮಾಜದಲ್ಲಿನ ಅಂಕು-ಡೊoಕುಗಳ ಬಗ್ಗೆ ಮನವರಿಕೆ ಮಾಡುತ್ತಿದ್ದರು. ಇದರಿಂದ ಮುಜುಗರಕ್ಕೆ ಒಳಗಾಗಿ ಬ್ರಿಟೀಷರು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದರು. ಬ್ರಿಟೀಷರು ದೇಶ ಬಿಟ್ಟು ಹೋದ ನಂತರವೂ ಹಾಲಕ್ಕಿ ಸಮುದಾಯದವರು ಹಗರಣ ನಡೆಸುವುದನ್ನು ಬಿಟ್ಟಿಲ್ಲ. ಕರಾವಳಿ ಭಾಗದ ಅನೇಕ ಊರುಗಳಲ್ಲಿ ಇಂದಿಗೂ ಹಗರಣಗಳು ಜೀವಂತವಾಗಿದೆ. ಅಲ್ಲಿ ಇಲ್ಲಿ ನಡೆದ ಅಪರಾತಪರಾಗಳು ಹಗರಣದಲ್ಲಿ ಬಯಲಾಗುತ್ತದೆ. ಹೀಗಾಗಿ ಇದನ್ನು ನೋಡುವುದಕ್ಕಾಗಿ ನಾನಾ ಭಾಗದ ಜನ ಹಗರಣದ ಕಡೆ ಬಂದು ಆಕರ್ಷಿತರಾಗುತ್ತಿದ್ದಾರೆ.

`ಬ್ರಿಟಿಷ್ ಅಧಿಕಾರಿಗಳಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ನಮ್ಮ ಜನರಿಗೆ ಇಂಗ್ಲಿಷ್ ತಿಳಿದಿರಲಿಲ್ಲ. ಸಂವಹನ ಸಮಸ್ಯೆ ಉಂಟಾದಾಗ ಹಗರಣ ಆಚರಿಸಲು ನಿರ್ಧರಿಸಲಾಯಿತು. ಸ್ಥಳೀಯ ಕಲಾವಿದರು ಹಗರಣ ಹುಟ್ಟು ಹಾಕಿದರು. ಜಾತ್ರೆ, ಸುಗ್ಗಿ ಕುಣಿತದ ಸಂದರ್ಭದಲ್ಲಿ ಹಗರಣಗಳನ್ನು ನಡೆಸಿ ಹಾಲಕ್ಕಿ ಜನ ಬ್ರಿಟೀಷರಿಗೆ ಬುದ್ದಿ ಕಲಿಸಿದರು’ ಎಂದು ಹಾಲಕ್ಕಿ ಹಗರಣದ ವಿಶೇಷದ ಬಗ್ಗೆ ಶಿರವಾಡದ ರವಿ ಗೌಡ ವಿವರಿಸುತ್ತಾರೆ. `ಈಗಿನ ತಲೆಮಾರಿನವರು ತಮ್ಮ ಕ್ರಿಯಾಶೀಲತೆ, ಕಲೆಯ ಜೊತೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಪ್ರತಿಬಿಂಬಿಸುವ ಜೊತೆ ಮನರಂಜನೆ ನೀಡುವಲ್ಲಿಯೂ ಹಗರಣ ಮುಖ್ಯಪಾತ್ರವಹಿಸಿದೆ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದರು.

Advertisement. Scroll to continue reading.

ಶನಿವಾರ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಾಲಕ್ಕಿ ಸಮುದಾಯದ ಹಗರಣ ನಡೆದಿದ್ದು, ಈ ಹಗರಣದಲ್ಲಿ ವಿದೇಶಿಗರೂ ಹೆಜ್ಜೆ ಹಾಕಿದರು. ಬ್ರೀಟಿಷರನ್ನು ಹಂಗಿಸುವುದಕ್ಕಾಗಿ ಹುಟ್ಟಿಕೊಂಡ ಹಗರಣದ ಹೋರಾಟದಲ್ಲಿ ಪರಕಿಯರೂ ಹೆಜ್ಜೆ ಹಾಕಿದ್ದು ವಿಶೇಷ ಎನಿಸಿತು. ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರ ಸಮಾಜದ ಸುಗ್ಗಿ ಹಬ್ಬದ ಅಂಗವಾಗಿ ರಥಬೀದಿಯಲ್ಲಿ ನಡೆದ ಹಗರಣದಲ್ಲಿ ವಿದೇಶಿಗರು ಉತ್ಸಾಹದಿಂದ ಭಾಗವಹಿಸಿದರು. `ಗೊಂಬೆ ಜೊತೆ ಗೊಂಬೆ ನಡೆಯುತ್ತಿದೆ’ ಎಂದು ಅಲ್ಲಿದ್ದ ಜನ ಮಾತನಾಡಿಕೊಂಡರು.

Advertisement. Scroll to continue reading.
Previous Post

ದುಡಿಯುವ ಮಗನ ದುಡುಕು ನಿರ್ಧಾರ: ಸಿದ್ದಿ ಹುಡುಗನ ಸಾವಿನಲ್ಲಿ ಅನುಮಾನ!

Next Post

ಅಪಾಯಕಾರಿ ಕಾರು ಚಾಲನೆ: ರೀಲ್ಸ್ ಮಾಡಲು ಹೋದವರ ವಿರುದ್ಧ ಕೇಸು!

Next Post
Dangerous driving A legal lesson for those who went to make reels!

ಅಪಾಯಕಾರಿ ಕಾರು ಚಾಲನೆ: ರೀಲ್ಸ್ ಮಾಡಲು ಹೋದವರ ವಿರುದ್ಧ ಕೇಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ