ಒಳ್ಳೆಯ ಕಂಪನಿ, ಉತ್ತಮ ವೇತನದಲ್ಲಿದ್ದರೂ ಮಾನಸಿಕ ನೆಮ್ಮದಿಯಿಲ್ಲದ ಕಾರಣ ಯಲ್ಲಾಪುರದ ಸ್ವಪ್ನಲ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಲ್ಲಾಪುರದ ಕಿರವತ್ತಿಯ ಇಂದಿರಾನಗರದಲ್ಲಿ ಸ್ವಪ್ನಲ್ ಲಾರೆನ್ಸ್ ಸಿದ್ದಿ ವಾಸವಾಗಿದ್ದರು. 23 ವರ್ಷದ ಅವರಿಗೆ ಬೆಂಗಳೂರಿನ ಕಂಪನಿ ಉದ್ಯೋಗ ನೀಡಿತ್ತು. ಅಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸುತ್ತಿದ್ದ ಅವರು ಕೆಲ ದಿನದ ಹಿಂದೆ ಊರಿಗೆ ಬಂದಿದ್ದರು. ಏಪ್ರಿಲ್ 12ರ ಮಧ್ಯಾಹ್ನ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಮನೆಯಲ್ಲಿ ಮಲಗಿದ್ದ ಅವರು 2 ಗಂಟೆ ಆಸುಪಾಸಿನಲ್ಲಿ ಶೌಚಾಲಯಕ್ಕೆ ಹೋದರು. ಅಲ್ಲಿಯೇ ಅವರು ನೇಣು ಹಾಕಿಕೊಂಡು ಸಾವನಪ್ಪಿದರು. ಶೌಚಾಲಯದ ಜಂತಿಗೆ ನೇತಾಡುತ್ತಿದ್ದ ಸ್ವಪ್ನಲ್ ಸಿದ್ದಿ ಅವರನ್ನು ನೋಡಿದ ಅವರ ತಾಯಿ ಸೋಬಿನಾ ಸಿದ್ದಿ ಆತಂಕಕ್ಕೆ ಒಳಗಾದರು. 4 ಗಂಟೆ ಆಸುಪಾಸಿನಲ್ಲಿ ಸ್ವಪ್ನಲ್ ಸಿದ್ದಿ ಶವವಾಗಿದ್ದರು.
ಎಲ್ಲವೂ ಚನ್ನಾಗಿಯೇ ಇದ್ದರೂ ಸ್ವಪ್ನಲ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದು ಏಕೆ? ಎಂದು ಗೊತ್ತಾಗಿಲ್ಲ. ಹೀಗಾಗಿ ಈ ಸಾವಿನಲ್ಲಿ ಅನುಮಾನವಿರುವುದಾಗಿ ಅವರ ಕುಟುಂಬದವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೋಬಿನಾ ಸಿದ್ದಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಾವಿನ ಸತ್ಯದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.
ಅದೃಷ್ಟದ ಆಟ: ಆಡಿಸುವವನೇ ನೃತದೃಷ್ಠ!
ಹಳಿಯಾಳದ ಭಾಗವತಿ ಬಳಿಯಿರುವ ಹನುಮಾನ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.
ಭಾಗವತಿಯ ಯಾಸೀನ ಗಬರಸಾಬ್ ಬಾಳೆಗುಂದಿ (30) ಎಂಬಾತರು ಅಲ್ಲಿ ರಸ್ತೆ ಮೇಲೆ ನಿಂತು ಜೂಜಾಡಿಸುತ್ತಿದ್ದರು. ಅದೃಷ್ಟ ತಾಗಿದರೆ 1 ರೂಪಾಯಿಗೆ 80ರೂ ನೀಡುವುದಾಗಿ ಆಮೀಷ ಒಡ್ಡಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ರಸ್ತೆಯಲ್ಲಿ ಹೋಗಿ-ಬರುವವರನ್ನು ಕೂಗಿ ಕರೆದು ಹಣ ಹೂಡುವಂತೆ ಪ್ರೇರೇಪಿಸುತ್ತಿದ್ದರು.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಷ್ಣಗೌಡ ಅರಿಕೇರಿ ಇದನ್ನು ಗಮನಿಸಿದರು. ತಕ್ಷಣ ಯಾಸೀನ ಮೇಲೆ ದಾಳಿ ನಡೆಸಿದರು. ಆಗ, ಅವರು ಬರೆದಿದ್ದ ಅಂಕಿ-ಸoಖ್ಯೆಗಳ ಚೀಟಿ ಸಿಕ್ಕಿತು. ಜೊತೆಗೆ ಆ ದಿನ ಜನರಿಂದ ಸಂಗ್ರಹಿಸಿದ್ದ 460ರೂ ಹಣವೂ ದೊರೆಯಿತು. ಹೀಗಾಗಿ ಯಾಸಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.