ಕಾರವಾರದಲ್ಲಿ ವಿದ್ಯುತ್ ಬಿಲ್ ವಿತರಕರಾಗಿದ್ದ ಅಂಕೋಲಾ ಹಾರವಾಡ ನಡುವಿನಕೇರಿಯ ದೀಪಕ ಗಾಂವ್ಕರ್ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಕಾರವಾರದ ದೇವತಿಶೆಟ್ಟಾ ಬಳಿ ದೀಪಕ ಗಾಂವ್ಕರ್ (59) ಅವರು ವಾಸವಾಗಿದ್ದರು. ಸದಾಶಿವಗಡ ಭಾಗದಲ್ಲಿ ಅವರು ಹೆಸ್ಕಾಂ ಬಿಲ್ ವಿತರಣೆಯ ಹೊಣೆ ಹೊತ್ತಿದ್ದರು. ಚಿತ್ತಾಕುಲದ ಸೀಬರ್ಡ ಕಾಲೋನಿಗೆ ಅವರು ವಿದ್ಯುತ್ ಬಿಲ್ ವಿತರಿಸಿದ್ದರು.
ಮೇ 18ರ ಮಧ್ಯಾಹ್ನ ಚಿತ್ತಾಕುಲ ಸೀಬರ್ಡ ಕಾಲೋನಿಯ ಅರವಿಂದ ಅವರ ಅಂಗಡಿ ಪಕ್ಕ ಕುಳಿತ ಊಟ ಮಾಡುತ್ತಿರುವಾಗ ಹೃದಯಘಾತದಿಂದ ಸಾವನಪ್ಪಿದರು. ಹೆಸ್ಕಾಂ ಶಾಖಾಧಿಕಾರಿ ಸಂಜಯ ನಾಯ್ಕ ಅವರು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.