ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಅಂಗಡಿ ನಡೆಸುವ ದೀಪಿಕಾ ಗೌಡ ಅವರನ್ನು ಅಡ್ಡಗಟ್ಟಿದ ಆಗಂತುಕರು ಮಾಂಗಲ್ಯದ ಸರ ದೋಚಿ ಪರಾರಿಯಾಗಿದ್ದಾರೆ. 2.85 ಲಕ್ಷ ರೂ ಮೌಲ್ಯದ ಬಂಗಾರದ ಸರ ಕಳೆದುಕೊಂಡ ದೀಪಿಕಾ ಗೌಡ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಗುಣವಂತೆಯ ಕೆಳಗಿನ ಹಕ್ಕಲಕೇರಿಯಲ್ಲಿ ದೀಪಿಕಾ ಗೌಡ (34) ಅವರ ಅಂಗಡಿಯಿದೆ. ಅಲ್ಲಿ ಅವರು ಒಂಟಿಯಾಗಿ ಜನರಲ್ ಸ್ಟೋರ್ಸ ನಡೆಸುತ್ತಾರೆ. ದೀಪಿಕಾ ಅವರು ಒಂಟಿಯಾಗಿರುವುದನ್ನು ನೋಡಿದ ಇಬ್ಬರು ಮೇ 18ರಂದು ಗ್ರಾಹಕರ ನೆಪದಲ್ಲಿ ಅಂಗಡಿಗೆ ಆಗಮಿಸಿದ್ದಾರೆ. ಅದಾದ ನಂತರ ಅಂಗಡಿಯ ಡ್ರಾವರನ್ನು ಹುಡುಕಾಡಿ, ಅಲ್ಲಿದ್ದ ಸರ ಅಪಹರಿಸಿದ್ದಾರೆ.
`ಆ ಇಬ್ಬರು ಆಗಂತುಕರು ಬೈಕಿನಲ್ಲಿ ಬಂದಿದ್ದು, ಒಬ್ಬರು ಹೆಲ್ಮೆಟ್ ಧರಿಸಿದ್ದರು. ಇನ್ನೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಅವರಿಬ್ಬರು ಹೊನ್ನಾವರ ಕಡೆ ಬೈಕ್ ಓಡಿಸಿಕೊಂಡು ಹೋದರು’ ಎಂದು ದೀಪಿಕಾ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಹುಡುಕಾಟ ನಡೆದಿದೆ.