ತದಡಿ ಬಂದರಿನಿoದ ಕಾಣೆಯಾಗಿದ್ದ ಕುಮಟಾ ಹೊಲನಗದ್ದೆಯ ವಿವೇಕ ಹರಿಕಂತ್ರ ಅವರ ಶವ ಸಮುದ್ರದಲ್ಲಿ ಸಿಕ್ಕಿದೆ.
ವಿವೇಕ ಹರಿಕಂತ್ರ ಅವರು ಗುರುಭೂಮಿ ಎಂಬ ಬೋಟಿನಲ್ಲಿ ಕೆಲಸಕ್ಕಿದ್ದರು. ಶನಿವಾರ ರಾತ್ರಿ ಬೋಟಿನಲ್ಲಿರುವಾಗಲೇ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು. ಬಲೆ ಸರಿಪಡಿಸುತ್ತಿರುವಾಗ ಅವರು ಸಮುದ್ರಕ್ಕೆ ಬಿದ್ದಿದ್ದರು.
ಮರುದಿನ ಮೀನು ಭೇಟೆಗೆ ಹೋಗಬೇಕಿದ್ದ ಕಾರ್ಮಿಕರೆಲ್ಲರೂ ಅವರ ಹುಡುಕಾಟ ನಡೆಸಿದ್ದರು. ಆದರೆ, ವಿವೇಕ್ ಹರಿಕಂತ್ರ ಎಲ್ಲಿಯೂ ಪತ್ತೆ ಆಗಿರಲಿಲ್ಲ. ಸೋಮವಾರ ಸಂಜೆ ಅವರ ಶವ ಸಿಕ್ಕಿದೆ. ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.