ಕಳೆದ ವರ್ಷ ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕೂದಲಳೆ ಅಂತರದಲ್ಲಿ ಬಚಾವಾಗಿದ್ದ ತಮಾಣಿ ಗೌಡ ಈ ವರ್ಷದ ಮೊದಲ ಮಳೆಗೆ ಬಲಿಯಾಗಿದ್ದಾರೆ. ಸಿಡಿಲು ಬಡಿದಿದ್ದರಿಂದ ಅವರು ಕೊನೆ ಉಸಿರೆಳೆದಿದ್ದಾರೆ.
ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ತಮಾಣಿ ಗೌಡ (65) ಅವರು ಕೊನೆ ಕ್ಷಣದಲ್ಲಿ ಬದುಕುಳಿದಿದ್ದರು. ಆಗ, ಶೌಚಕ್ಕಾಗಿ ನದಿ ಕಡೆ ಹೋಗಿದ್ದ ಅವರು ಗಂಗಾವಳಿಯ ಅಬ್ಬರ ನೋಡಿ ಮನೆ ಕಡೆ ಹೊರಟಿದ್ದರು. ಪ್ರವಾಹದ ನೀರು ಮನೆಗೆ ನುಗ್ಗುವುದನ್ನು ನೋಡಿ ಅಲ್ಲಿಂದ ಓಡಿ ಪರಾರಿಯಾಗಿದ್ದರು. ಇದರಿಂದ ಅವರು ಆ ವೇಳೆ ಜೀವ ಉಳಿಸಿಕೊಂಡಿದ್ದು, ಅದೇ ಮನೆ ರಿಪೇರಿ ವೇಳೆ ಸೋಮವಾರ ಸಿಡಿಲು ಬಡಿದು ಸಾವನಪ್ಪಿದ್ದಾರೆ.
ಅಂಕೋಲಾದ ಉಳುವರೆಯಲ್ಲಿ ಮನೆ ಕಟ್ಟಿಕೊಂಡಿದ್ದ ತಮಾಣಿ ಗೌಡ ಅವರಿಗೆ ಬೇರೆ ಎಲ್ಲಿಯೂ ಆಶ್ರಯವಿರಲಿಲ್ಲ. ಹೀಗಾಗಿ ಪ್ರವಾಹ ಮುಗಿದ ನಂತರವೂ ಅವರು ಅಲ್ಲಿಯೇ ವಾಸವಾಗಿದ್ದರು. ಕಳೆದ ವರ್ಷದ ಮಳೆಗೆ ಅವರ ಮನೆ ಹಾಳಾಗಿತ್ತು. ಹೀಗಾಗಿ ಸೋಮವಾರ ಅವರು ಮನೆ ರಿಪೇರಿ ಕೆಲಸಕ್ಕೆ ಮುಂದಾಗಿದ್ದರು. ಮನೆಯ ಮೇಲ್ಚಾವಣಿ ದುರಸ್ತಿ ಮಾಡುವಾಗ ಮಳೆ ಶುರುವಾಗಿದ್ದು, ಈ ವೇಳೆ ಬಡಿದ ಸಿಡಲು ತಿಮಾಣಿ ಗೌಡರ ಜೀವಪಡೆಯಿತು.