ಯಲ್ಲಾಪುರದ ತಾಮೀರ್ ಕೋ ಆಪರೇಟಿವ್ ಸೊಸೈಟಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಅವರಿಗೆ ಸಿದ್ದಾಪುರದಲ್ಲಿ ಅಪಘಾತವಾಗಿದೆ. ಮೀರ್ ಕರೀಂ ಅವರ ಕಾರು ಜಖಂ ಆಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇ 20ರಂದು ಮೀರ್ ಕರಂ ಅವರು ಶಿರಸಿಯಿಂದ ಸಿದ್ದಾಪುರ ಕಡೆ ಕಾರು ಚಲಾಯಿಸಿಕೊಂಡು ಹೊರಟಿದ್ದರು. ಕಾನಸೂರು ಬಸ್ ನಿಲ್ದಾಣದ ಹತ್ತಿರ ಟೆಂಪೋವೊAದು ಅವರ ಕಾರಿಗೆ ಹಿಂದಿನಿoದ ಗುದ್ದಿತು. ಆ ಟೆಂಪೋವನ್ನು ಶಿರಸಿ ಕಾಗೋಡಿನ ಲೋಹಿತ್ ನಾಯ್ಕರು ಓಡಿಸುತ್ತಿದ್ದರು.
ಟೆಂಪೋ ವೇಗವಾಗಿ ಬಂದು ಗುದ್ದಿದ ಕಾರಣ ಕಾರಿನ ಹಿಂಬಾಗ ಜಖಂ ಆಗಿದೆ. ಟೆಂಪೋಗೆ ಸಹ ಹಾನಿಯಾಗಿದೆ. ಈ ನಡುವೆ ಎರಡು ವಾಹನ ಚಾಲಕರ ನಡುವೆ ವಾಗ್ವಾದ ನಡೆದಿದ್ದು, ಅದು ಅಲ್ಲಿಯೇ ಬಗೆಹರಿಯದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾರು ಜಖಂ ಮಾಡಿದ ಬಗ್ಗೆ ಟೆಂಪೋ ಚಾಲಕನ ವಿರುದ್ಧ ಮೀರ್ ಕರೀಂ ದೂರು ನೀಡಿದ್ದಾರೆ.