ಯಲ್ಲಾಪುರದ ತೆಲಂಗಾರದ ಬಳಿಯ ಕಾಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಜನ ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ 8110ರೂಪಾಯಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಮೇ 20ರ ರಾತ್ರಿ ತೆಲಂಗಾರ ಗ್ರಾಮದ ಮಾರ್ಕೆಜಡ್ಡಿ ಬಳಿಯ ಮರ್ಕೆಯಮ್ಮ ದೇವಾಲಯ ಬಳಿ ಐದು ಜನ ಇಸ್ಪಿಟ್ ಆಡುತ್ತಿದ್ದರು. ಮೇ 21ರ ನಸುಕು ಹರಿದರೂ ಅವರ ಆಟ ಮುಗಿದಿರಲಿಲ್ಲ. ಈ ವಿಷಯ ಅರಿತ ಪಿಎಸ್‌ಐ ಸಿದ್ದಪ್ಪ ಗುಡಿ ಅಂದರ್ ಬಾಹರ್ ಆಟಗಾರರ ಮೇಲೆ ದಾಳಿ ನಡೆಸಿದರು.
ಮಾರ್ಕೇಜಡ್ಡಿಯ ವಿಷ್ಣು ನಾಯ್ಕ, ಅದೇ ಊರಿನ ಚೇತನ ನಾಯ್ಕ, ರವಿ ನಾಯ್ಕ, ತೆಲಂಗಾರಿನ ಬಸವರಾಜ ಕಟ್ಟಿಮನಿ ಸಿಕ್ಕಿಬಿದ್ದರು. ಇಡಗುಂದಿಯ ಸಂತೋಷ ರಾಮಚಂದ್ರ ನಾಯ್ಕ ಹಾಗೂ ಸಂತೋಷ ಮಾಣಿ ನಾಯ್ಕರನ್ನು ಸಹ ಪೊಲೀಸರು ಅಲ್ಲಿ ವಶಕ್ಕೆಪಡೆದರು.
ಅಂದರ್ ಬಾಹರ್ ಆಡುವುದು ಅಪರಾಧ ಎಂಬ ಅರಿವಿದ್ದರೂ ಈ ಎಲ್ಲರೂ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತು ಆಟವಾಡುತ್ತಿದ್ದರು. ಕಾನೂನುಬಾಹಿರವಾಗಿ ಅವರು ಹಣವನ್ನು ಪಂಥವಾಗಿ ಕಟ್ಟಿದ್ದರು. ಪೊಲೀಸರು ಅವರು ಆಟಕ್ಕೆ ಕಟ್ಟಿದ್ದ 8110ರೂ ಹಣದ ಜೊತೆ ಇಸ್ಪಿಟ್ ಎಲೆ ಹಾಗೂ ಇನ್ನಿತರ ಪರಿಕ್ಕರಗಳನ್ನು ವಶಕ್ಕೆಪಡೆದರು. ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣವನ್ನು ದಾಖಲಿಸಿದರು.