ಕುಮಟಾ: ಟ್ಯೂಶನ್’ಗೆ ಎಂದು ಮನೆಯಿಂದ ಹೊರಟ ಬೆಟ್ಕುಳಿಯ ಜುನೇಧ್ ಅಬ್ದುಲ್ಲಾ ಮೊಗಲ (15) ಎಂಬ ಬಾಲಕ ಕಾಣೆಯಾಗಿದ್ದಾನೆ.
ಈತ ಅಂಕೋಲಾದ `ಶ್ರೀರಾಮ ಸ್ಟಡಿ ಸರ್ಕಲ್’ಗೆ ಟ್ಯೂಶನ್’ಗೆ ಹೋಗುತ್ತಿದ್ದ. ಭಾನುವಾರ ಸಹ ಟ್ಯೂಶನ್’ಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ. ಬೆಳಗ್ಗೆ ಎದ್ದು ಅಂಕೋಲಾ ಕಡೆ ಹೊರಟ ಆತ ಸಂಜೆ ಆದರೂ ಮನೆಗೆ ಮರಳಿಲ್ಲ. ಸ್ಟಡಿ ಸರ್ಕಲ್’ನಲ್ಲಿ ವಿಚಾರಿಸಿದಾಗ ಆತ ಅಲ್ಲಿ ಸಹ ಇಲ್ಲ ಎಂದು ಗೊತ್ತಾಗಿ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. `ಇದೀಗ ತನ್ನ ಮಗನನ್ನು ಹುಡುಕಿಕೊಡಿ’ ಎಂದು ಆತನ ಪಾಲಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
Discussion about this post