ಸೊಳ್ಳೆ ಕಾಟದಿಂದ ಬೇಸತ್ತ ಜನರ ಸಮಸ್ಯೆ ದೂರ ಮಾಡುವುದಕ್ಕಾಗಿ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಅಧ್ಯಕ್ಷ ಭಗೀರಥ ನಾಯ್ಕ ಅವರೇ ಗಟಾರಕ್ಕೆ ಇಳಿದು ಗಲೀಜು ಆರಿಸಿದ್ದಾರೆ!
ಕಳೆದ ನಾಲ್ಕು ದಿನಗಳಿಂದ ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ವಜ್ರಳ್ಳಿಯಲ್ಲಿ ಹಾದು ಹೋದ ರಾಜ್ಯ ಹೆದ್ದಾರಿಯ ಗಟಾರದಲ್ಲಿಯೂ ಕೆಸರು ತುಂಬಿದೆ. ಗಟಾರದ ನಿರ್ವಹಣೆ ಸರಿಯಾಗಿಲ್ಲದ ಕಾರಣ ಆ ಭಾಗದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ನೀರು ನಿಂತಿರುವುದರಿAದ ಸೊಳ್ಳೆಗಳ ಉತ್ಪಾದನೆಯೂ ಜೋರಾಗಿದೆ.
ಅವಧಿಗೂ ಮುನ್ನ ಮಳೆಗಾಲ ಬಂದಿರುವುದರಿoದ ಸ್ಥಳೀಯ ಆಡಳಿತಗಳಿಂದ ಗಟಾರ ಸ್ವಚ್ಛತೆ ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ ಕಚೇರಿಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಸಹ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಗಟಾರದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ತುಂಬುತ್ತಿದ್ದು, ಅನಾಹುತ ತಪ್ಪಿಸುವುದಕ್ಕಾಗಿ ವಜ್ರಳ್ಳಿ ಗ್ರಾ ಪಂ ಅಧ್ಯಕ್ಷ ಭಗೀರಥ ನಾಯ್ಕ ಅವರೇ ಗಟಾರಕ್ಕೀಳಿದು ಕಸ-ಕಡ್ಡಿ ಆರಿಸಿದ್ದಾರೆ. ಜೊತೆಗೆ ಅಲ್ಲಿನ ತ್ಯಾಜ್ಯವನ್ನು ಮೇಲೆತ್ತಿದ್ದಾರೆ.