ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ಖಂಡಿಸಿ ಕಡವಾಡದ ಜನ ಹೆಸ್ಕಾಂ ಕಚೇರಿ ಎದುರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಜನ ಅಧಿಕಾರಿಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. `ಫೋನ್ ಮಾಡಿದರೂ ಇಲ್ಲಿ ಸ್ವೀಕರಿಸುವವರಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಕಚೇರಿಗೆ ಬಂದರೂ ಅಧಿಕಾರಿಗಳು ಸಿಗುವುದಿಲ್ಲ’ ಎಂದು ದೂರಿದರು.
`ಮಳೆಗಾಲ ಪೂರ್ವದಲ್ಲಿಯೇ ವಿದ್ಯುತ್ ಕಡಿತ ಜೋರಾಗಿದೆ. ಮಳೆಗಾಲದ ಪರಿಸ್ಥಿತಿ ಏನು?’ ಎಂದು ಪ್ರಶ್ನಿಸಿದರು. `ಕಳೆದ ನಾಲ್ಕು ದಿನಗಳಿಂದ ಕಡವಾಡ ಭಾಗದಲ್ಲಿ ಕರೆಂಟ್ ಇಲ್ಲ. ದೂರು ನೀಡಿದರೂ ದುರಸ್ಥಿ ಆಗಿಲ್ಲ. ರಾತ್ರಿ ವೇಳೆಯಲ್ಲಿಯೂ ವಿದ್ಯುತ್ ಕಡಿತ ಮಾಡಲಾಗಿದ್ದು, ಜನ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ವಿವರಿಸಿದರು.
ಹೆಸ್ಕಾಂ ಅಧಿಕಾರಿಗಳ ವಿರುದ್ಧ ಅಲ್ಲಿದ್ದವರು ಧಿಕ್ಕಾರ ಕೂಗಿದರು. ಸಮಸ್ಯೆ ಆಲಿಸಲು ಅಧಿಕಾರಿಗಳು ಬಾರದ ಕಾರಣ ಆಕ್ರೋಶವ್ಯಕ್ತಪಡಿಸಿದರು.