ಕಳೆದ ಐದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ರೆಡ್ ಅಲರ್ಟ ಘೋಷಣೆ ಮುಂದುವರೆದಿದೆ.
ಶುಕ್ರವಾರ ಸುರಿದ ಮಳೆಗೆ ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಣ್ಣೆ ಹೊಳೆ ಸೇತುವೆ ಬಳಿ ನಿರ್ಮಿಸಿದ ಬದಲಿ ರಸ್ತೆ ರಾತ್ರಿ ವೇಳೆ ಕೊಚ್ಚಿ ಹೋಗಿದೆ. ಹೀಗಾಗಿ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುಡುಗು-ಸಿಡಿಲಿನ ಜೊತೆ ಜೋರು ಮಳೆಯಾಗುವ ಬಗ್ಗೆ ಜಿಲ್ಲಾಡಳಿತವೂ ಎಚ್ಚರಿಸಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಹೀಗಾಘಿ ಉತ್ತರ ಕನ್ನಡ, ಜಿಲ್ಲೆಯ ಕರಾವಳಿ ಪ್ರದೇಶವಾದ ಮಾಜಾಳಿಯಿಂದ ಭಟ್ಕಳದವರೆಗೆ ಹೈ ಅಲರ್ಟ ಎಚ್ಚರಿಕೆ ನೀಡಲಾಗಿದೆ. ಮೇ 24ರಂದು ಬೆಳಗ್ಗೆ 8.30ರಿಂದ ರಾತ್ರಿ 8.30ರವರೆಗೆ 2.7-3.3 ಮೀಟರ್ ವ್ಯಾಪ್ತಿಯ ಎತ್ತರದ ಅಲೆಗಳು ಏಳಲಿವೆ ಎಂಬ ಮುನ್ಸೂಚನೆಯಿದೆ. ಹೀಗಾಗಿ ಎಲ್ಲಾ ಬಗೆಯ ಸಮುದ್ರ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.