ಅಂಕೋಲಾದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ವಿನಾಯಕ ಗೌಡ ಅವರು ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ.
ಅಂಕೋಲಾ ಶಿರುಕುಳಿಯಲ್ಲಿ ವಿನಾಯಕ ಗೌಡ (22) ವಾಸವಾಗಿದ್ದರು. ತಾಲೂಕಿನ ಎಲ್ಲಡೆಯಿಂದ ಅವರಿಗೆ ಸೆಂಟ್ರಿAಗ್ ಕೆಲಸಕ್ಕೆ ಕರೆಯೋಲೆ ಬರುತ್ತಿತ್ತು. ದುಡಿದ ಹಣವನ್ನು ಅವರು ತಮ್ಮ ವ್ಯಸನಕ್ಕೆ ಮೀಸಲಿಟ್ಟಿದ್ದರು.
ಮೇ 19ರಂದು ರಾಜೇಶ್ವರಿ ಶಾಲೆ ಆವರಣಕ್ಕೆ ತೆರಳಿ ಅವರು ಮದ್ಯ ಸೇವನೆ ಶುರು ಮಾಡಿದ್ದರು. ಮದ್ಯದ ಜೊತೆ ಅವರು ವಿಷವನ್ನು ಖರೀದಿಸಿದ್ದು, ಅದನ್ನು ಒಟ್ಟಿಗೆ ಸೇವಿಸಿದರು. ಅಸ್ವಸ್ಥಗೊಂಡ ವಿನಾಯಕ ಗೌಡ ಅವರನ್ನು ಅವರ ಅಣ್ಣ ಅಭಿಷೇಕ ಗೌಡ ಅವರು ಅಂಕೋಲಾ ಆಸ್ಪತ್ರೆಗೆ ದಾಖಲಿಸಿದರು.
ಅದಾದ ನಂತ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕರೆದೊಯ್ದರು. ಅಲ್ಲಿಯೇ ಆಸ್ಪತ್ರೆಯಲ್ಲಿದ್ದ ವಿನಾಯಕ ಗೌಡ ಅವರು ಮೇ 22ರಂದು ಪ್ರಾಣ ಬಿಟ್ಟರು.