ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ ಹೋರಾಟ ನಡೆಸಿ 6 ತಾಸಿನಲ್ಲಿ ಸಮಸ್ಯೆ ಬಗೆಹರಿಸಿದೆ.
ಅಂಕೋಲಾದ ಬೇಲೇಕೇರಿ ತಿರುವಿನಿಂದ ಕಾರವಾರಕ್ಕೆ ಕುಮಟಾ ಮತ್ತು ಅಂಕೋಲಾ ಡಿಪೋದ ಬಸ್ಸಿನ ದರದಲ್ಲಿ ವ್ಯತ್ಯಾಸವಿರುವುದು ಶುಕ್ರವಾರ ಗಮನಕ್ಕೆ ಬಂದಿತು. ಕುಮಟಾ ಡಿಪೋ ಬಸ್‌ಗಳಲ್ಲಿ 43 ರೂ ಟಿಕೆಟ್ ಕೊಡುತ್ತಿದ್ದು, ಕಾರವಾರ ಡಿಪೋದವರು 58ರೂಪಾಯಿಯ ಟಿಕೆಟ್ ನೀಡುತ್ತಿದ್ದರು. ಬೇಲೆಕೇರಿ ಕ್ರಾಸ್‌ನಿಂದ ಅವರ್ಸಾಕ್ಕೆ ಕುಮಟಾ ಡಿಪೋದ ಬಸ್‌ಗಳಲ್ಲಿ 20 ರೂ ಹಾಗೂ ಕಾರವಾರ ಡಿಪೋದ ಬಸ್‌ಗಳಲ್ಲಿ 35 ರೂ ವಸೂಲಿ ನಡೆದಿತ್ತು.
ಸರ್ಕಾರಿ ಸಂಸ್ಥೆಯ ಬಸ್ಸುಗಳಲ್ಲಿಯೇ ಹಣ ವ್ಯತ್ಯಾಸವಾದ ಬಗ್ಗೆ ಪ್ರಯಾಣಿಕರು ಜನಶಕ್ತಿ ವೇದಿಕೆಗೆ ದೂರು ನೀಡಿದ್ದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಈ ಬಗ್ಗೆ ನಿಗಮದ ಎಂ ಡಿ ಪ್ರಿಯಾಂಗ ಎಂ ಅವರ ಗಮನಕ್ಕೆ ತಂದರು. ಡಿಪೋ ವ್ಯವಸ್ಥಾಪಕರ ಜೊತೆ ಮಾತನಾಡಿದ ಪ್ರಿಯಾಂಗ ಎಂ ಆರು ತಾಸಿನಲ್ಲಿ ಸಮಸ್ಯೆ ಬಗೆಹರಿಸಿದರು. `ತಾಂತ್ರಿಕ ಕಾರಣದಿಂದ 15ರೂ ಹಣ ವ್ಯತ್ಯಾಸವಾಗಿದ್ದು, ಇದೀಗ ಪ್ರಯಾಣಿಕರ ಲೂಟಿ ತಪ್ಪಿದೆ’ ಎಂದು ಮಾಧವ ನಾಯಕ ಪ್ರತಿಕ್ರಿಯಿಸಿದರು.