ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ ಪರೀಕ್ಷೆಯಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಪ ಪೂ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಕಾಲೇಜಿನ ಒಟ್ಟು 73 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಒಬ್ಬರು ಸಾವಿರದೊಳಗಿನ ರ‍್ಯಾಂಕ್ ಪಡೆದು ಅಗ್ರಶ್ರೇಣಿಯ ದಾಖಲೆ ಬರೆದಿದ್ದಾರೆ. ಇದರೊಂದಿಗೆ ನಾಲ್ಕು ವಿದ್ಯಾರ್ಥಿಗಳು ಐದು ಸಾವರದೊಳಗಿನ ಹಾಗೂ ಆರು ವಿದ್ಯಾರ್ಥಿಗಳು 10 ಸಾವಿರದೊಳಗಿನ ರ‍್ಯಾಂಕ್‌ಪಡೆದು ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ.
ಇಂಜಿನಿಯರಿ0ಗ್ ವಿಭಾಗದಲ್ಲಿ ಪ್ರಣವ ಎಮ್ ಭಟ್ಟ ಅವರು 938ನೇ ರ‍್ಯಾಂಕ್ ಪಡೆದಿದ್ದಾರೆ. ಶ್ರದ್ಧಾ ಆರ್ ಭಟ್ಟ ಅವರು 1785, ಸೌರವ ಗಾಂವ್ಕರ ಅವರು 2172, ಆದರ್ಶ ಎಂ ಅವರು 2818, ಗಣೇಶ ಗೌಡ ಅವರು 7092, ಸುಜಿತ್ ಭಾಸ್ಕರ್ ಭಟ್ಟ ಅವರು 7908, ನಿತ್ಯಾನಂದ ಭಟ್ಟ ಅವರು 10587, ಅಪೂರ್ವಾ ಜಿ ಭಟ್ಟ ಅವರು 10787ನೇ ರ‍್ಯಾಂಕ್ ಪಡೆದಿದ್ದಾರೆ.
ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕಾರಯುತ ಕಲಿಕೆಯಲ್ಲಿ ಈ ಕಾಲೇಜು ಮುಂಚೂಣಿಯಲ್ಲಿದೆ. `ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದರಿಂದ ಸಾಧನೆ ಸಾಧ್ಯವಾಗಿದೆ’ ವಿದ್ಯಾರ್ಥಿಗಳಳ ಮಾತು. ಕೆನರಾ ಎಕ್ಸಲೆನ್ಸ್ ಕಾಲೇಜು ಮಕ್ಕಳ ಸಾಧನೆಯ ಬಗ್ಗೆ ಸಂಸ್ಥೆ ಅಧ್ಯಕ್ಷ ಡಾ ಜಿ ಜಿ ಹೆಗಡೆ ಅವರು ಮೆಚ್ಚುಗೆವ್ಯಕ್ತಪಡಿಸಿದರು. ಕಾಲೇಜು ಆಡಳಿತ ಮಂಡಳಿಯ ವಿಶ್ವಸ್ಥರಾದ ಡಿ ಎನ್ ಭಟ್ಟ ಹಾಗೂ ಪ್ರಾಚಾರ್ಯ ನಾಗರಾಜ ಜಿ ಅವರು ಮಕ್ಕಳ ಸಾಧನೆಗೆ ಸಂತಸವ್ಯಕ್ತಪಡಿಸಿದರು.