ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ 4-5 ದಿನಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಈ ಬಗ್ಗೆ ದೂರು ಸ್ವೀಕರಿಸುವ ಹೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
ಉಚಗೇರಿಯ ರಾಜಿವಾಡ ಬಳಿ ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲ ಎಂಬುದನ್ನು ಅರಿತು ಗುರುವಾರ ರಾತ್ರಿ ಹೆಸ್ಕಾಂ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ತಡರಾತ್ರಿಯವರೆಗೆ ಸಾಹಸ ನಡೆಸಿ ಆ ಊರಿಗೆ ವಿದ್ಯುತ್ ಕಲ್ಪಿಸಿದರು. ರಭಸ ಗಾಳಿಯಿಂದಾಗಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಸರಬರಾಜು ಇರಲಿಲ್ಲ. ಮಳೆಯ ಅಬ್ಬರಕ್ಕೆ ವಿದ್ಯುತ್ ಕಂಬ ಸಹ ಮುರಿದಿದ್ದವು.
ಹೆಸ್ಕಾಂ ಸಿಬ್ಬಂದಿ ಧರ್ಮರಾಜ ಬೆಡಸಗಾವ್ ವಿದ್ಯುತ್ ಸಂಪರ್ಕ ಮರು ಜೋಡಣೆಯ ಕಾಯಾಚರಣೆಯಲ್ಲಿದ್ದರು. ಅವರ ಜೊತೆ ಆಶಿ ಪೋತಗೇರಿ, ಪ್ರವೀಣ ಬಾಪೂಜಿ ಊರಿಗೆ ವಿದ್ಯುತ್ ಬೆಳಕು ಕೊಡಿಸಿದರು. ಸ್ಥಳೀಯರಾದ ಮಂಜುನಾಥ ನೇರಲಗಿ ಹಾಗೂ ದತ್ತಾತ್ರೆಯ ಹೆಗಡೆ ಸಹ ಸಹಕಾರ ನೀಡಿದರು.