ಕಾರವಾರದ ಕೈಗಾ ವಸತಿಗೃಹ ಪ್ರದೇಶಕ್ಕೆ ಆಗಮಿಸಿದ ನಾಗರ ಹಾವು ಅಲ್ಲಿನ ಮಂಜುನಾಥ ನಾಯ್ಕ ಅವರ ಮನೆ ಅಡುಗೆ ಕೋಣೆ ಪ್ರವೇಶಿಸಿದ್ದು, ಉರಗ ತಜ್ಞರು ಹಾವು ಹಿಡಿದು ಕಾಡಿಗೆ ಬಿಟ್ಟರು.
`ಮಳೆಗಾಲದ ಕಾರಣ ನಾಗರ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕುತ್ತವೆ. ಅಡುಗೆ ಮನೆ ಬೆಚ್ಚಗಿರುವ ಕಾರಣ ಅವು ಅಲ್ಲಿ ಆಶ್ರಯಪಡೆಯುವ ಸಾಧ್ಯತೆ ಹೆಚ್ಚಿದೆ’ ಎಂದು ಉರಗ ತಜ್ಞ ಬಿಲಾಲ್ ಶೇಖ್ ನೆರೆದಿದ್ದವರಿಗೆ ಮಾಹಿತಿ ನೀಡಿದರು.
`ಮನೆಯ ಒಳಗೆ ಹಾವು ಬಂದರೆ ಜನ ಭಯಪಡಬಾರದು. ಉರಗ ತಜ್ಞರನ್ನು ಕರೆಯಿಸಿ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಬೇಕು’ ಎಂದು ಅವರು ಮನವಿ ಮಾಡಿದರು. `ಶೀತರಕ್ತ ಜೀವಿಯಾದ ಹಾವು ಮಳೆಗಾಲದಲ್ಲಿ ಮೈ ಕಾಯಿಸಲು ಬೆಚ್ಚಗಿನ ಜಾಗ ಹುಡುಕುವುದು ಸಾಮಾನ್ಯ’ ಎಂದವರು ಮನವರಿಕೆ ಮಾಡಿದರು.
ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ ಮತ್ತು ಕದ್ರಾ ವಲಯ ಅರಣ್ಯಾಧಿಕಾರಿ ರಾಘು ರಾಘು ಕುರ್ನಿಪೇಟ್ ಹಾವು ಹಿಡಿಯುವ ಕಾರ್ಯಾಚರಣೆಯಲ್ಲಿದ್ದರು.