ಕುಮಟಾದ ಚಾಲಕ ದಿವಾಕರ್ ಉಪ್ಪಾರ್ ಗಾಂಜಾ ಸೇವಿಸಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪಾಠ ಮಾಡಿದ್ದಾರೆ.
ಕುಮಟಾದ ಸಿದ್ಧನಬಾವಿಯಲ್ಲಿ ದಿವಾಕರ್ ಉಪ್ಪಾರ್ ವಾಸವಾಗಿದ್ದರು. ಚಾಲಕರಾಗಿದ್ದ ಅವರು ಅಪರೂಪಕ್ಕೆ ಒಮ್ಮೆ ಗಾಂಜಾ ಸೇವಿಸುತ್ತಿದ್ದರು. ಮೇ 19ರಂದು ಮೂರುರು ಗುಡ್ಡದ ಕಡೆ ಹೋದ ಅವರು ಅಲ್ಲಿ ಗಾಂಜಾ ಸೇವಿಸುವ ಮನಸ್ಸು ಮಾಡಿದರು. ಸಂಜೆ ವೇಳೆ ನಶೆಯಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದರು.
ಪೊಲೀಸ್ ಉಪನಿರೀಕ್ಷಕ ಮಯೂರ ಪಟ್ಟಣಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಲು ದಿವಾಕರ್ ಉಪ್ಪಾರ್ ತಡವರಿಸಿದರು. ಅಮಲಿನಲ್ಲಿದ್ದ ಅವರನ್ನು ಪೊಲೀಸರು ವೈದ್ಯರ ಮುಂದೆ ಹಾಜರುಪಡಿಸಿದರು. ತಪಾಸಣೆ ನಡೆಸಿದ ವೈದ್ಯರಿಗೆ ದಿವಾಕರ್ ಉಪ್ಪಾರ್ ಗಾಂಜಾ ಸೇವಿಸಿರುವುದು ದೃಢವಾಯಿತು.
ಈ ಹಿನ್ನಲೆ ವೈದ್ಯರು ಪೊಲೀಸರಿಗೆ ವರದಿ ಒಪ್ಪಿಸಿದರು. ಆ ವರದಿ ಆಧಾರದಲ್ಲಿ ಪೊಲೀಸರು ದಿವಾಕರ್ ಉಪ್ಪಾರ್ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದರು.