ಕುಮಟಾದ ಗಂಗಾವಳಿಯಲ್ಲಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಸಾವಾಗಿದೆ. ಓರಿಸ್ಸಾದ ಕಾರ್ಮಿಕ ಸೌಭಾಗ್ಯ ನಿರಂಜನ್ ಸಾವನಪ್ಪಿದ ವ್ಯಕ್ತಿ.
ನಾರಾಯಣ ತಾಂಡೇಲ್ ಅವರ ಮೀನುಗಾರಿಕಾ ಬೋಟಿನಲ್ಲಿ ಸೌಭಾಗ್ಯ ನಿರಂಜನ್ ಕೆಲಸ ಮಾಡುತ್ತಿದ್ದರು. ಶನಿವಾರ ಮೀನುಗಾರಿಕೆ ಮುಗಿಸಿದ ನಂತರ ಅವರು ವಿಶ್ರಾಂತಿಗೆ ತೆರಳಿದ್ದರು. ರಾತ್ರಿ ಊಟ ಮಾಡಿ ಶೆಡ್ಡಿನೊಳಗೆ ಮಲಗಿದ ಸ್ಥಿತಿಯಲ್ಲಿಯೇ ಅವರು ಪ್ರಾಣ ಬಿಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಏಳದ ಕಾರಣ ಇತರೆ ಕಾರ್ಮಿಕರು ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಆಗ ಸಾವಿನ ಸಂಗತಿ ಗೊತ್ತಾಯಿತು. ಹೃದಯಘಾತದಿಂದ ಕಾರ್ಮಿಕ ಸಾವನಪ್ಪಿದ ಅನುಮಾನವಿದೆ. ಒಟ್ಟು 20 ಕಾರ್ಮಿಕರು ಈ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.





