ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಪಾರ ಹಣ ಸಂಪಾದಿಸಲು ಉದ್ದೇಶಿಸಿದ ಹಳಿಯಾಳದ ಉದ್ಯಮಿ ವೆಂಕಟೇಶ ಗಡಾದ್ ಅವರು ನಕಲಿ ಆಫ್ ಬಳಸಿ 18 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ!
ವೆoಕಟೇಶ್ ಗಡಾದ್ ಅವರು ಶೇರು ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಗ ಅವರಿಗೆ ಆಫ್ ಡೌನ್‌ಲೋಡ್ ಮಾಡುವಂತೆ ಮೆಸೆಜ್ ಬಂದಿದೆ. ಇದನ್ನು ನಂಬಿದ ಅವರು V-Trade ಎಂಬ ಆಫ್ ಡೌನ್‌ಲೋಡ್ ಮಾಡಿದ್ದಾರೆ. 2025ರ ಏಪ್ರಿಲ್ 30ರಿಂದ ಮೇ 15ರವರೆಗೆ ಆ ಆಫ್ ಮೂಲಕ ವಿವಿಧ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ.
ಅವರು ಹುಡಿದ ಹಣ ಡಬಲ್ ಆದ ಬಗ್ಗೆ ಆಫ್ ಕಾಣಿಸಿದೆ. ಹೀಗಾಗಿ ಎಲ್ಲಾ ಶೇರುಗಳನ್ನು ಮಾರಾಟ ಮಾಡಿದ್ದಾರೆ. ಅದಾದ ನಂತರ ಹಣ ಹಿಂಪಡೆಯಲು ಹೋದಾಗ ಅವರ ಖಾತೆಗೆ ಲಾಭದ ಹಣ ಬಂದಿಲ್ಲ. ಅವರು ಹೂಡಿಕೆ ಮಾಡಿದ ಹಣವೂ ಸಿಕ್ಕಿಲ್ಲ. ಒಟ್ಟು 1869000 ರೂ ಹಣ ಹೂಡಿಕೆ ಮಾಡಿದ್ದು, ಅದೆಲ್ಲವೂ ಸೈಬರ್ ಕಳ್ಳರ ಪಾಲಾಗಿದೆ.
ವಿ ಟ್ರೇಡ್ ಆಪ್ ಸಂಬoಧಿಸಿ ಅವರು ವೆಂಚೂರು ಕಂಪನಿಗೆ ಫೋನ್ ಮಾಡಿದಾಗ, `ಆ ಆಫ್ ನಮ್ಮದಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ವೆಂಕಟೇಶ್ ಗಡಾದ್ ಅವರು ತಮಗಾದ ಅನ್ಯಾಯದ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.