ಸುರಿಯುತ್ತಿರುವ ಮಳೆಯಿಂದಾಗ ಬೆಟ್ಟ ಗುಡ್ಡಗಳ ಮಣ್ಣು ಸಡಿಲಗೊಂಡಿದ್ದು, ಭಾನುವಾರ ಸಂಜೆ ಕುಮಟಾದ ಮೂರೂರಿನಲ್ಲಿ ರಸ್ತೆ ಮೇಲೆ ಕಲ್ಬಂಡೆ ಬಿದ್ದಿದೆ.
ಮೂರುರು ಮುಸುಗುಪ್ಪ ಮಾರ್ಗವಾಗಿ ಬೃಹತ್ ಆಕಾರದ ಬಂಡೆ ರಸ್ತೆಗೆ ಉರುಳಿ ಬಂದಿದೆ. ಇದರ ಜೊತೆ ಕೆಲ ಪ್ರಮಾಣದಲ್ಲಿ ಮಣ್ಣು ಸಹ ರಸ್ತೆ ಮೇಲೆ ಬಿದ್ದಿದೆ.
ಉತ್ತರ ಕನ್ನಡ ಜಿಲ್ಲಾಡಳಿತ ಭಾನುವಾರ ರಾತ್ರಿಯಿಂದಲೇ ಬಂಡೆ ತೆರವು ಕಾರ್ಯಾಚರಣೆ ಶುರು ಮಾಡಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಬಂಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಪ್ರಯಾಣಿಕರು ಮೂರುರು-ಕುಮಟಾ ಹೆದ್ದಾರಿ ಮೂಲಕ ಸಂಚರಿಸಲು ದಾರಿಯಿದ್ದು, ಮುಸುಗುಪ್ಪ ಮಾರ್ಗದ ಬದಲು ಹೆದ್ದಾರಿ ಮಾರ್ಗ ಬಳಸಲು ಸೂಚಿಸಲಾಗಿದೆ. ಸದ್ಯ ಹರ್ಕಡೆ ಬಳಕೂರು ರಸ್ತೆಯಿಂದ ವಾಹನ ಬಿಡಲಾಗುತ್ತಿದೆ.