ಅಂಕೋಲಾದ ಲಕ್ಷ್ಮಣ ಗೌಡ ಅವರು ಗೋಕರ್ಣದ ಸಸ್ವರ ರೆಸಾರ್ಟಿಗೆ ಕೋಲಾಟಕ್ಕಾಗಿ ತೆರಳಿದಾಗ ಸಾವನಪ್ಪಿದ್ದಾರೆ.
ಅಂಕೋಲಾ ಬಡಿಗೇರಿಯ ಲಕ್ಷ್ಮಣ ಗೌಡ (60) ಅವರು ಕೃಷಿಕರು. ಜೊತೆಗೆ ಕೋಲಾಟದ ಮೂಲಕ ಅವರು ತಮ್ಮ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುತ್ತಿದ್ದರು. ಮೇ 24ರಂದು ಲಕ್ಷ್ಮಣ ಗೌಡ ಅವರ ಜೊತೆ ಇನ್ನೂ 12 ಕಲಾವಿದರು ಕೋಲಾಟ ಆಡುವುದಕ್ಕಾಗಿ ಗೋಕರ್ಣದ ಓಂ ಕಡಲತೀರದ ಬಳಿಯ ರೆಸಾರ್ಟಿಗೆ ಹೋಗಿದ್ದರು. ಸಸ್ವರ ರೆಸಾರ್ಟಿನಲ್ಲಿ ಎಲ್ಲರೂ ಸೇರಿ ಕೋಲಾಟ ನಡೆಸಿ, ಪ್ರವಾಸಿಗರನ್ನು ರಂಜಿಸಿದ್ದರು.
ಸoಜೆ 7ರಿಂದ 8ಗಂಟೆಯವರೆಗೆ ಎಲ್ಲರೂ ಸೇರಿ ಕೋಲಾಟ ಪ್ರದರ್ಶನ ಮಾಡಿದ್ದರು. ಅತ್ಯಂತ ಉತ್ಸಾಹದಿಂದ ಕುಣಿದು ಕುಪ್ಪಳಿಸಿದ್ದರು. ಲಕ್ಷ್ಮಣ ಗೌಡ ಅವರ ಪುತ್ರ ಮಾರುತಿ ಗೌಡ ಸಹ ಈ ಕೋಲಾಟದಲ್ಲಿ ಭಾಗವಹಿಸಿದ್ದರು.
8.30ರ ವೇಳೆಗೆ ಕೋಲಾಟ ಮುಗಿಸಿ ವಿಹರಮಿಸುತ್ತಿರುವಾಗ ಲಕ್ಷö್ಮಣ ಗೌಡ ಅವರಿಗೆ ಎದೆನೋವು ಕಾಣಿಸಿತು. ರೆಸಾರ್ಟಿನಲ್ಲಿಯೇ ಅವರು ತಮ್ಮ ಪ್ರಾಣ ಬಿಟ್ಟರು. ಮಾರುತಿ ಗೌಡ ಅವರು ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.