ದಂಪತಿಸಹಿತ ಸಂಬoಧಿಕರ ಮನೆಗೆ ಹೋಗಿ ಮರಳುತ್ತಿದ್ದ ವೃದ್ಧರಿಗೆ ಕಾರು ಗುದ್ದಿದೆ. ಪರಿಣಾಮ ಜೊಯಿಡಾ ರಾಮನಗರ ಬಳಿಯ ಬಾಳಕೃಷ್ಣ ಗಾವಡಾ ಸಾವನಪ್ಪಿದ್ದಾರೆ.
ಮೊನ್ನೆ ಕಾಮ್ರಾ ಗ್ರಾಮದ ಬಾಳಕೃಷ್ಣ ಗಾವಡಾ (70) ಅವರು ತಮ್ಮ ಪತ್ನಿ ರಾಧಿಕಾ ಗಾವಡಾ ಅವರ ಜೊತೆ ಕುರವೈ ಗ್ರಾಮದ ನೆಂಟರಮನೆಗೆ ಹೋಗಿದ್ದರು. ಅಲ್ಲಿದ್ದವರನ್ನು ಮಾತನಾಡಿಸಿ ಸಂಜೆ ಮನೆಗೆ ಮರಳುತ್ತಿದ್ದಾಗ ಜಗಲಪೇಟೆ-ಕ್ಯಾಸಲರಾಕ್ ಬಳಿ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಅಸು ಗ್ರಾಮದ ಕಡೆಯಿಂದ ಬಂದ ಜೋರಾಗಿ ಬಂದ ಕಾರು ಸ್ಕೂಟಿಗೆ ಗುದ್ದಿದ ರಭಸಕ್ಕೆ ಬಾಳಕೃಷ್ಣ ಗಾವಡಾ ಹಾಗೂ ರಾಧಿಕಾ ಗಾವಡಾ ಇಬ್ಬರೂ ನೆಲಕ್ಕೆ ಬಿದ್ದರು.
ಅವರು ಓಡಿಸುತ್ತಿದ್ದ ಸ್ಕೂಟಿ ಜಖಂ ಆಯಿತು. ನೆಲಕ್ಕೆ ಬಿದ್ದ ಪರಿಣಾಮ ಇಬ್ಬರೂ ಗಾಯಗೊಂಡರು. 108 ಆಂಬುಲೆನ್ಸ್ ಮೂಲಕ ಅವರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಆ ಇಬ್ಬರನ್ನು ಬೆಳಗಾವಿಯ ವೆನುಗ್ರಾಮ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಬಾಳಕೃಷ್ಣ ಗಾವಡಾ ಅವರು ಸಾವನಪ್ಪಿದರು. ಅಪಘಾತಕ್ಕೆ ಕಾರಣನಾದ ದೆಹಲಿಯ ಕಾರು ಚಾಲಕ ನಿಖಿಲ್ ಬಜಾಜ್ ವಿರುದ್ಧ ಬಾಳಕೃಷ್ಣ ಅವರ ಪುತ್ರ ಪ್ರಶಾಂತ ಗಾವಡಾ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.