ಕಾರವಾರದ ಗ್ರಾಸಿಂ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡಿದ್ದ ನೆರೆ ರಾಜ್ಯದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.
ಕಾರವಾರದ ಬಿಣಗಾದಲ್ಲಿರುವ ಗ್ರಾಸಿಂ ಇಂಡಸ್ಟ್ರಿಯಲ್ಲಿ ಸ್ಟೆಪೋಲ್ಡಿಂಗ್ ಪೇಂಟಿoಗ್ ಎಂಬ ಕೆಲಸ ನಡೆಯುತ್ತಿದೆ. ಈ ಕೆಲಸದ ಉಸ್ತುವಾರಿ ನೋಡಿಕೊಳ್ಳಲು ಮಹಾರಾಷ್ಟದಿಂದ ರಾಜೇಂದ್ರ ಚೌದರಿ ಎಂಬಾತರು ಆಗಮಿಸಿದ್ದರು. ಮೋನಾರ್ಕ ಇಂಡಸ್ಟ್ರಿಯಲ್ ಸರ್ವಿಸ್ ಅವರು ರಾಜೇಂದ್ರ ಚೌದರಿ ಅವರನ್ನು ಉಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕೆ ನೇಮಿಸಿದ್ದರು.
ಸುಪ್ರವೈಸರ್ ಆಗಿದ್ದ ರಾಜೇಂದ್ರ ಚೌದರಿ ಅವರಿಗೆ ಗ್ರಾಸೀಂ ಇಂಡಸ್ಟ್ರಿಯೊಳಗಿನ ಗೆಸ್ಟ್ ಹೌಸಿನಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ರೂಂ ನಂ 20ನ್ನು ಅವರಿಗೆ ನೀಡಲಾಗಿತ್ತು. ಮೇ 25ರ ಸಂಜೆ 6 ಗಂಟೆಗೆ ರೂಮಿನ ಒಳಗೆ ಹೋದ ಅವರು ಮತ್ತೆ ಬಾಗಿಲು ತೆರೆಯಲಿಲ್ಲ. ಅದೇ ದಿನ ರಾತ್ರಿ 10.50ರ ಆಸುಪಾಸಿಗೆ ರೂಮಿನಲ್ಲಿದ್ದ ಬೆಡ್ ಶೀಟಿನಿಂದ ಅವರು ಕುತ್ತಿಗೆಗೆ ಬಿಗಿದುಕೊಂಡು ಫ್ಯಾನಿಗೆ ನೇತು ಹಾಕಿಕೊಂಡಿದ್ದರು.
ಗ್ರಾಸೀo ಇಂಡಸ್ಟ್ರಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಗಿರೀಶ ಕಾಜಗಾರ್ ಅವರು ರಾಜೇಂದ್ರ ಚೌದರಿ ಅವರು ಸಾವನಪ್ಪಿರುವುದನ್ನು ಗಮನಿಸಿದರು. ಅದಾದ ನಂತರ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.