ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ಡಾ ನಾರಾಯಣ ಹೊಸ್ಮನೆ ಅವರು ಕಾನ್ಸರ್ ರೋಗದ ವಿರುದ್ಧ ಹೋರಾಟದಲ್ಲಿ ಹೊಸ ಸಂಶೋಧನೆ ನಡೆಸಿದ್ದಾರೆ. ಅವರ ಈ ಸಾಧನೆಯನ್ನು ಅಮೇರಿಕಾ ಮೆಚ್ಚಿಕೊಂಡಿದ್ದು, `ಉನ್ನತ ವಿದ್ವಾಂಸ’ ಎಂದು ಗುರುತಿಸಿದೆ.
ಬೋರಾನ್ ಆಧಾರಿತ ಸಂಶೋಧನೆಯಿAದ ಕಾನ್ಸರ್ ಗುಣಮುಖ ಸಾಧ್ಯ ಎಂದು ಡಾ ನಾರಾಯಣ ಹೊಸ್ಮನೆ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಅವರು ಸಂಶೋಧನೆ ನಡೆಸಿ ಕಾನ್ಸರ್ ಕೋಶಗಳ ಮೇಲೆ ಬೋರಾನ್ ಅಣುಗಳ ಪ್ರಯೋಗ ಮಾಡಿದ್ದಾರೆ. ಕಾನ್ಸರ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವುದಕ್ಕಾಗಿ ಡಾ ನಾರಾಯಣ ಹೊಸ್ಮನೆ ಅವರು ಹೊಸ ಬೋರಾನ್ ಆಧಾರಿತ ರಾಸಾಯನಿಕ ಅಭಿವೃದ್ಧಿಪಡಿಸಿದ್ದಾರೆ.
ಕಾನ್ಸರ್ ರೋಗಿಗಳಿಗೆ ಅಗತ್ಯವಿರುವ ಬೋರಾನ್ ಔಷಧಿಯ ವಿಭಾಗದಲ್ಲಿ ಡಾ ನಾರಾಯಣ ಹೊಸ್ಮನೆ ಅವರು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಔಷಧದ ಅಭಿವೃದ್ಧಿಗೆ ವಿಷಯದಲ್ಲಿ ಡಾ ನಾರಾಯಣ ಹೊಸ್ಮನೆ ಅವರ ಕೊಡುಗೆ ಗಮನಿಸಿದ ಅಮೇರಿಕಾ ಅವರ ತಂತ್ರಜ್ಞಾನವನ್ನು ಪ್ರಶಂಶಿಸಿದೆ. ಸದ್ಯ ಬೋರಾನ್ ರಸಾಯನ ವಿಜ್ಞಾನ ಕ್ಷೇತ್ರದ ಸಂಶೋಧನೆಗೆ ಉನ್ನತ ವಿದ್ವಾಂಸ ಎಂದು ಸ್ಕಾಲರ್ ಜಿಪಿಎಸ್ ಮೂಲಕ ಅವರನ್ನು ಗುರುತಿಸಲಾಗಿದೆ.
ಡಾ ನಾರಾಯಣ ಹೊಸ್ಮನೆ ಅವರು ಮೂಲತಃ ಗೋಕರ್ಣದ ರಥಬೀದಿಯವರು. ಎಲ್ಲರೂ ಅವರನ್ನು ಪ್ರೀತಿಯಿಂದ `ಜಾಮಿ’ ಎಂದು ಕರೆಯುತ್ತಾರೆ. ಇಲ್ಲಿನ ಭದ್ರಕಾಳಿ ಪ್ರೌಢಶಾಲೆ, ಕುಮಟಾ ಎ ವಿ ಬಾಳಿಗಾ ಕಾಲೇಜಿನಲ್ಲಿಯೇ ಅವರು ಶಿಕ್ಷಣಪಡೆದಿದ್ದಾರೆ. ಧಾರವಾಡದಲ್ಲಿ ಸ್ನಾತಕೋತ್ತರ ಪದವಿಪಡೆದು ವಿವಿಧಡೆ ಸಂಶೋಧನಾ ಅಧ್ಯಯನ ನಡೆಸಿದ್ದು, ಸದ್ಯ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಎಡಿನ್ ಬರ್ಗ ವಿಶ್ವವಿದ್ಯಾಲಯದ ಡೆಕಾಲ್ಬ್ನಲ್ಲಿರುವ ಲೂಮಾ ಲಿಂಡಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.