6
  • Latest
Illegal sand: Beat police complaint against the tipper that fell into the river!

ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!

AchyutKumar by AchyutKumar
in ಸ್ಥಳೀಯ
Illegal sand: Beat police complaint against the tipper that fell into the river!

ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ನದಿಗೆ ಬಿದ್ದ ವಿಡಿಯೋ ವೈರಲ್ ಆದ ಬಳಿಕ ಮುಜುಗರಕ್ಕೆ ಸಿಲುಕಿದ ಪೊಲೀಸರು ಆ ವಾಹನದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ವಾಹನದ ಚಾಲಕನನ್ನು ಆರೋಪಿ ಸ್ಥಾನದಲ್ಲಿರಿಸಿದ್ದು, ಚಾಲಕ ಹಾಗೂ ಮಾಲಕನ ಹೆಸರನ್ನು ಸಹ ನಮೂದಿಸಿಲ್ಲ!

ADVERTISEMENT

ಹೊನ್ನಾವರದ ಶರಾವತಿ ನದಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅನೇಕ ಪ್ರಭಾವಿಗಳು ಈ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಜಿಲ್ಲೆಯಲ್ಲಿ ಅಕ್ರಮ ನಡೆಸುವವರನ್ನು ಪ್ರಶ್ನಿಸುವವರಿಲ್ಲ. ಮರಳುಗಾರಿಕೆಗೆ ಅನುಮತಿ ಸಿಗದ ಕಾರಣ ಸರ್ಕಾರದ ಆದಾಯಕ್ಕೂ ಹೊಡೆತ ಬಿದ್ದಿದೆ.

ಈಚೆಗೆ ಹೊನ್ನಾವರದ ಕಳಸಿನಮೂಟೆ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ನದಿಗೆ ಬಿದ್ದಿತ್ತು. ಕ್ರೇನ್ ಮೂಲಕ ಆ ಟಿಪ್ಪರನ್ನು ಮೇಲೆತ್ತಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಇಲ್ಲ ಎಂದಾದರೆ ಆ ಪ್ರಕರಣವೇ ಮುಚ್ಚು ಹೋಗುತ್ತಿತ್ತು. ವೈರಲ್ ಆದ ವಿಡಿಯೋದ ಬಗ್ಗೆ ಪತ್ರಕರ್ತರು ಜಿಲ್ಲಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರು. ಜಿಲ್ಲಾಧಿಕಾರಿಗಳು ಕಠಿಣ ಕ್ರಮದ ಭರವಸೆ ನೀಡಿದ್ದರು. ಇದು ಪೊಲೀಸರಿಗೆ ಸಹ ತಲೆನೋವು ತಂದಿದ್ದು, ವಿಡಿಯೋ ಆಧಾರದಲ್ಲಿಯೇ ಇದೀಗ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.

ಕಳಸಿನಮೂಟೆ ಭಾಗದ ಬೀಟ್ ಪೊಲೀಸ್ ರವಿ ನಾಯ್ಕ ಅವರು `ವಿಡಿಯೋ ನೋಡಿದ ನಾನು ಆ ಊರಿಗೆ ಹೋಗಿ ವಿಚಾರಿಸಿದೆ. ಮೇ 22ರಂದು ಕಳಸಿನಮೂಟೆ ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ವೇಳೆ ನದಿ ದಡ ಕುಸಿತು ಲಾರಿ ನೀರಿಗೆ ಬಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕ್ರೇನ್ ಮೂಲಕ ಟಿಪ್ಪರ್ ಮೇಲೆತ್ತಿ ಒಯ್ಯಲಾಗಿದೆ. ಸರ್ಕಾರಿ ಸ್ವತ್ತಾದ ಮರಳು ಕದಿಯುವ ಪ್ರಯತ್ನ ನಡೆದಿರುವುದು ಸತ್ಯ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಈ ಹಿನ್ನಲೆ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆ ಲಾರಿಯ ಹುಡುಕಾಟ ನಡೆಸಿದ್ದಾರೆ.

Advertisement. Scroll to continue reading.

ಗಣಿ ಇಲಾಖೆಯಿಂದಲೂ ದಾಳಿ!
ಹೊಸಾಡು ಹಾಗೂ ಬಳಕೂರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ವಾಹನಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿ ಈ ದಾಳಿ ನಡೆದಿದ್ದು, ಎರಡು ವಾಹನವನ್ನು ವಶಕ್ಕೆಪಡೆದಿದ್ದಾರೆ. ಹಿರಿಯ ಭೂ ವಿಜ್ಞಾನಿ ಆಶಾ ಅವರು ಈ ದಾಳಿಯ ಮುಂದಾಳತ್ವವಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

Previous Post

ವಿಜಯಮಲ್ಯಾ ಏರ್‌ಲೈನ್ಸಿನಲ್ಲಿ ಅವ್ಯವಹಾರ: ಹಳಿಯಾಳದ ನೇವಲ್ ಕಮಾಡೆಂಟ್ ಖಾತೆಗೂ ಕನ್ನ!

Next Post

ಶಾಲೆ ಸುತ್ತ ತಂಬಾಕು ಮಾರಾಟ: ಸಾವಿರ ರೂ ತಂಬಾಕು ಮಾರುವವನಿಗೆ 200 ರೂ ದಂಡ!

Next Post
Tobacco sales around schools Rs 200 fine for selling Rs 1000 worth of tobacco!

ಶಾಲೆ ಸುತ್ತ ತಂಬಾಕು ಮಾರಾಟ: ಸಾವಿರ ರೂ ತಂಬಾಕು ಮಾರುವವನಿಗೆ 200 ರೂ ದಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ