ಅಂಕೋಲಾದ ರೈಲು ಹಳಿಗಳ ಮೇಲೆ ನಡೆಯುತ್ತಿದ್ದ ವ್ಯಕ್ತಿಗೆ ರೈಲು ಬಡಿದಿದೆ. ಪರಿಣಾಮ ಆ ವ್ಯಕ್ತಿ ಅಲ್ಲಿಯೇ ಸಾವನಪ್ಪಿದ್ದು, ಸಾವನಪ್ಪಿದವರ ಗುರುತು ಪತ್ತೆ ಆಗಿಲ್ಲ.
ಕೊಂಕಣ ರೈಲ್ವೆಯ ಟ್ರಾಕ್‌ಮೆನ್ ಹಾರವಾಡದ ಛತ್ರಪತಿ ಗೌಡ ಅವರು ಮೇ 27ರ ಬೆಳಗ್ಗೆ ರೈಲು ಹಳಿ ಮೇಳೆ ಹೆಣ ಛಿದ್ರವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಅಂದಾಜು 65 ವರ್ಷದ ವ್ಯಕ್ತಿಯ ದೇಹ ಅದಾಗಿದ್ದು, ಎಷ್ಟೇ ಪ್ರಯತ್ನಪಟ್ಟರೂ ಗುರುತು ಪತ್ತೆ ಸಾಧ್ಯವಾಗಿಲ್ಲ.
ಬೆಳಗ್ಗೆ 4.30ರಿಂದ 8.30ರ ಅವಧಿಯಲ್ಲಿ ಹಳಿಗಳ ಮೇಲೆ ನಡೆದು ಹೋಗುವಾಗ ರೈಲು ಬಡಿದಿರುವ ಸಾಧ್ಯತೆಯಿದೆ. ಹಟ್ಟಿಕೇರಿ ರೈಲ್ವೆ ಬ್ರಿಡ್ಜಿನ ಬಳಿ ಹೆಣ ನೋಡಿ ಅವರು ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.