ಶಿರಸಿ ಕಾನಗೋಡಿನ ಗಣಪತಿ ಹೆಗಡೆ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮಟ್ಕಾ ಆಡಿಸಲು ಹೋಗಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಕೃಷಿ ಕೆಲಸ ಮಾಡಕೊಂಡಿದ್ದ ಗಣಪತಿ ಹೆಗಡೆ (72) ಅವರು ಕಾನಗೋಡಿನಿಂದ ಸೋಮಸಾಗರ ಹೋಗುವ ರಸ್ತೆ ಅಂಚಿನಲ್ಲಿ ಮಟ್ಕಾ ಆಡಿಸುತ್ತಿದ್ದರು. ಅಲ್ಲಿ ಹೋಗಿ ಬರುವ ಜನರನ್ನು ಕರೆದು ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. 1 ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಜನರಿಂದ 1220ರೂ ಸಂಗ್ರಹಿಸಿದ್ದರು.
ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಸಂತೋಷಕುಮಾರ ಎಂ ಈ ವಿಷಯ ತಿಳಿದು ಅಲ್ಲಿ ತೆರಳಿದರು. ಗಣಪತಿ ಹೆಗಡೆ ಅವರನ್ನು ಶೋಧಿಸಿ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದರು. ಜೊತೆಗೆ ಈ ಬಗ್ಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.