ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣಕ್ಕೆ ಮೋಜು-ಮಸ್ತಿಗೆ ಬರುವವರೇ ಹೆಚ್ಚು. ಹೀಗಿರುವಾಗ ಮಂಗಳವಾರ ವಿದೇಶಿ ಮಗುವೊಂದು ದೇವಾಲಯದ ಮುಂದೆ ಭಕ್ತಿಯಿಂದ ಶಿವ ಧ್ಯಾನದಲ್ಲಿ ನಿರತರಾಗಿರುವುದು ಕಾಣಿಸಿತು.
ರಷ್ಯಾದಿಂದ ಭಾರತಕ್ಕೆ ಬಂದ ಬಾಲಕಿ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ್ದು, ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರು. ಕೈ ಮುಗಿದು ಅವರು ಶಿವ ಜಪ ಮಾಡಿದರು. ವಿದೇಶಿ ಬಾಲೆಯಾದರೂ ತಲೆಯಲ್ಲಿ ಮಲ್ಲಿಗೆ ಮಾಲೆ, ಹಣೆಯಲ್ಲಿ ಕುಂಕುಮ ಧರಿಸಿದ್ದು ವಿಶೇಷವೆನಿಸಿತು. ಕೈಯಲ್ಲಿ ತಾವರೆ ಹೂವು ಹಿಡಿದು ಬಂದಿದ್ದ ಹುಡುಗಿ ಭಕ್ತಿಯಿಂದ `ಓಂ ನಮಃ ಶಿವಾಯ’ ಎಂದು ಉಚ್ಚರಿಸಿದರು.
ಸಾಕಷ್ಟು ಬಾರಿ ಶಿವ ಜಪ ಮಾಡಿದ ನಂತರ ಹೂವನ್ನು ದೇವರಿಗೆ ಅರ್ಪಿಸಿದರು. ಬಾಲಕಿಯ ಭಕ್ತಿ ನೋಡಿದ ಅನೇಕರು ಆಕೆಯ ಗುಣಗಾನ ಮಾಡಿದರು. ಕೆಲವರು ಬಾಲಕಿಯ ಫೋಟೋ ಹಾಗೂ ವಿಡಿಯೋ ಮಾಡಿಕೊಂಡಿದ್ದು, ಕ್ಯಾಮರಾ ಕಂಡ ನಂತರ ಆ ಬಾಲಕಿ ನಾಚಿ ಅಲ್ಲಿಂದ ಮರೆಯಾದರು.
ಫಾರಿನ್ ಪೋರಿಯ ಶಿವ ಧ್ಯಾನದ ವಿಡಿಯೋ ಇಲ್ಲಿ ನೋಡಿ..