ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ನಗರದ ಬಾಡದಲ್ಲಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಧಾರಾಕಾರವಾಗಿ ಸುರಿದ ಮಳೆಗೆ ಬಂದರು ಇಲಾಖೆ ಸಮುದ್ರದಲ್ಲಿ ಅಳವಡಿಸಿದ್ದ ದಿಕ್ಸೂಚಿ ಮುರಿದಿದೆ. ಹಡಗುಗಳಿಗೆ ದಾರಿ ತೋರುವುದಕ್ಕಾಗಿ ಅಳವಡಿಸಲಾಗಿದ್ದ ದಿಕ್ಸೂಚಿ ತುಂಡಾಗಿ ಕಾರವಾರ ಕಡಲಿಗೆ ಅಪ್ಪಳಿಸಿದೆ. ಬೋಯ್ ಆಂಕರ್ ಎಂದು ಗುರುತಿಸಲ್ಪಡುವ ಯಂತ್ರ ತುಂಡಾಗಿದ್ದರಿAದ ಹಡಗುಗಳು ಬಂದರಿಗೆ ಬರಲು ಸಮಸ್ಯೆ ಅನುಭವಿಸುವ ಸಾಧ್ಯತೆಯಿದೆ.
ಕಾರವಾರದ ನೌಕಾನೆಲೆ ಮುಂಭಾಗ ಬಾರೀ ಪ್ರಮಾಣದಲ್ಲಿ ನೀರು ತುಂಬಿಕೊoಡಿದ್ದರಿoದ ವಾಹನಗಳು ಸಮಸ್ಯೆಗೆ ಸಿಲುಕಿದೆ. ನೌಕಾನೆಲೆ ಬಳಿ ಕೃತಕ ಪ್ರವಾಹ ಉಂಟಾಗದoತೆ ಮುನ್ನಚ್ಚರಿಕೆವಹಿಸಿರುವ ಬಗ್ಗೆ ಅಲ್ಲಿನ ಅಧಿಕಾರಿಗಳು ನೀಡಿದ ಮಾಹಿತಿ ಸುಳ್ಳಾಗಿದೆ. ಅರಗಾ ಬಳಿ ನೀರು ನುಗ್ಗಿದ್ದರಿಂದ ವಾಹನ ಸವಾರರು ಸಾಕಷ್ಟು ಸಂಖ್ಯೆಯಲ್ಲಿ ಸಮಸ್ಯೆ ಅನುಭವಿಸಿದ್ದಾರೆ.
`ಅರಗಾ ಗೇಟಿನ ಬಳಿ ಯಾವುದೇ ಕಾರಣಕ್ಕೂ ನೀರು ನಿಲ್ಲುವುದಿಲ್ಲ. ಅಲ್ಲಿ ನೀರು ನಿಲ್ಲದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ’ ಎಂದು ನೌಕಾನೆಲೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಬಳಿ ಹೇಳಿದ್ದು, ಅದಾಗಿ ಒಂದೇ ವಾರದಲ್ಲಿ ನೈಜ ಪರಿಸ್ಥಿತಿ ಅರಿವಿಗೆ ಬಂದಿದೆ.