ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕ ರೀತಿ ಸಾಗಿಸುತ್ತದ್ದ ಗೋವುಗಳಿಗೆ ಹಳಿಯಾಳ ಪೊಲೀಸರು ಮರುಜೀವ ನೀಡಿದ್ದಾರೆ. ಹಸುಗಳಿಗೆ ಹಿಂಸೆ ನೀಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು.
ಗುರುವಾರ ಪೊಲೀಸರು ಹಳಿಯಾಳ-ತೆರಗಾಂವ್ ರಾಜ್ಯ ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ, ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಗೋವು ಸಾಗಾಟ ನಡೆದಿರುವುದು ಗಮನಕ್ಕೆ ಬಂದಿತು. ತೆರಗಾಂವ್ ಗ್ರಾಮದ ಬಳಿ ಆ ವಾಹನವನ್ನು ಪೊಲೀಸರು ಹಿಡಿದರು. ದಾಖಲೆ ಪ್ರಶ್ನಿಸಿದಾಗ ಗೋವು ಸಾಗಾಟದ ಅನುಮತಿ ಪತ್ರ ಸಿಗಲಿಲ್ಲ.
ಕೂಡಲೇ ಪೊಲೀಸರು ಆ ವಾಹನವನ್ನು ವಶಕ್ಕೆಪಡೆದರು. ವಾಹನದಲ್ಲಿದ್ದ ಧಾರವಾಡದ ಚಮನಸಬ್ ಭಗವಾನ್, ಆಯೇಬಬೇಪಾರಿ, ನವೀದ್‌ರಾಜಸಾಬ್ ದತ್ತಿ, ಬಾಬುಸಾಬ್ ಜಪಾರಿ ವಿರುದ್ಧ ಪ್ರಕರಣ ದಾಖಲಿಸಿದರು. ವಶಕ್ಕೆಪಡೆದ ಗೋವುಗಳನ್ನು ದುಸುಗಿ ಗ್ರಾಮದ ಪುಣ್ಯಕೋಟಿ ಗೋಶಾಲೆಗೆ ಕಳುಹಿಸಿದರು. ಪಶು ಸಂಗೋಪನಾ ಇಲಾಖೆಯವರು ಆಗಮಿಸಿ, ಗೋವುಗಳ ಆರೋಗ್ಯ ತಪಾಸಣೆ ಮಾಡಿದರು.