ಹಳಿಯಾಳದ ಹವಗಿ ಕೆರೆ ಹತ್ತಿರ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆ ವೇಳೆ ಆ ಮೂವರು ಗಾಂಜಾ ನಶೆಯಲ್ಲಿರುವುದು ಗೊತ್ತಾಗಿದೆ.
ಮೇ 29ರಂದು ಖಾನಾಪುರದ ನಾಗರಾಜ ಕುರುಬರ್, ವಿಠ್ಠಲ ಇಟಗಿ, ಅಲ್ತಾಪ ಬಡೋದೆಕರ್ ಪರಸ್ಪರ ನಿಂದಿಸಿಕೊಳ್ಳುತ್ತಿದ್ದರು. ಜೊತೆಗೆ ಹವಗಿ ಕೆರೆ ಬಳಿ ಓಡಾಡುವವರನ್ನು ಹಿಯಾಳಿಸುತ್ತಿದ್ದರು. ಪದೇ ಪದೇ ನಗುವುದು, ಕೆಟ್ಟ ಭಾಷೆ ಉಪಯೋಗದಲ್ಲಿ ತೊಡಗಿದ್ದ ಆ ಮೂವರನ್ನು ಹಳಿಯಾಳದ ಪಿಎಸ್‌ಐ ಬಸವರಾಜ ಮಬನೂರು ಅವರು ಆ ಮೂವರನ್ನು ವಿಚಾರಣೆಗೆ ಒಳಪಡಿಸಿದರು. ಪೊಲೀಸರ ಬಳಿಯೂ ಅವರು ಮೊದಲು ಸರಿಯಾಗಿ ಮಾತನಾಡಲಿಲ್ಲ. ಅದಾದ ನಂತರ ತಾವೆಲ್ಲರೂ ಗಾಂಜಾ ಸೇದಿರುವುದನ್ನು ಒಪ್ಪಿಕೊಂಡರು. ವೈದ್ಯಕೀಯ ಪರೀಕ್ಷೆಯಲ್ಲಿ ಸಹ ಅವರು ಗಾಂಜಾ ಸೇವಿಸಿರುವುದು ದೃಢವಾಯಿತು. ಹೀಗಾಗಿ ಆ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು.
1ರೂಪಾಯಿಗೆ 80ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಸಿದ್ದಾಪುರದ ಜೈರಾಮ್ ಮಡಿವಾಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಸಿದ್ದಾಪುರದ ಹಲಗೇರಿ ಬಳಿಯ ಪಡವನಬೈಲು ಜೈರಾಮ ಮಡಿವಾಳ ಅವರು ಮೇ 29ರಂದು ಭಗತ್ ಸಿಂಗ್ ಸರ್ಕಲ್ ಬಳಿ ನಿಂತಿದ್ದರು. ಅಲ್ಲಿ ಹೋಗಿ-ಬರುವವರನ್ನು ಕರೆದು ಮಟ್ಕಾ ಆಡುವಂತೆ ಪ್ರೇರೇಪಿಸುತ್ತಿದ್ದರು. ಪೊಲೀಸ ನಿರೀಕ್ಷಕ ಜೆ ಬಿ ತಿಪ್ಪೆಸ್ವಾಮಿ ಅವರ ಮೇಲೆ ದಾಳಿ ನಡೆಸಿದ್ದು, ಆಗ ಜನರಿಂದ ವಸೂಲಿ ಮಾಡಿದ್ದ 910ರೂ ಹಣ ಸಿಕ್ಕಿತು. ಅದರೊಂದಿಗೆ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದ ಪೊಲೀಸರು ಜೈರಾಮ್ ಮಡಿವಾಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ವಿಪರೀತ ಸರಾಯಿ ಕುಡಿಯುವ ಚಟ ಹೊಂದಿದ್ದ ಕುಮಟಾ ಗುಂದದ ರಾಘವೇಂದ್ರ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಮೇ 29ರ ರಾತ್ರಿ ರಾಘವೇಂದ್ರ ನಾಯ್ಕ ಅವರು ಕಾಣೆಯಾಗಿದ್ದರು. ಮೇ 30ರ ಬೆಳಗ್ಗೆ ಮೀನು ಮಾರುಕಟ್ಟೆ ಸೇತುವೆ ಬಳಿಯ ತಾರಬಾಗಿಲು ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಅವರ ಶವ ಸಿಕ್ಕಿದೆ. ಗೂಡಂಗಡಿ ನಡೆಸುವ ರಾಘವೇಂದ್ರ ನಾಯ್ಕ ಅವರ ಅಣ್ಣ ವಿನಾಯಕ ನಾಯ್ಕ ಈ ಬಗ್ಗೆ ಕುಮಟಾ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.