ಯಲ್ಲಾಪುರದ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜೊತೆಗೆ ಚಾಲಕರೊಬ್ಬರಲ್ಲಿಯೂ ಕೊರೊನಾ ಸೊಂಕು ದೃಢವಾಗಿದೆ. ಈ ಹಿನ್ನಲೆ ಆ ಇಬ್ಬರನ್ನು ಕ್ವಾರಂಟೈನ್’ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈಚೆಗೆ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಶೀತ-ನೆಗಡಿ-ಜ್ವರದಿಂದ ಬಳಲಿ ಅಸ್ವಸ್ಥರಾದವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆ ಪೈಕಿ ಕೊರೊನಾ ಲಕ್ಷಣಗಳಿರುವ ಎಂಟು ರೋಗಿಗಳ ಗಂಟಲ ದೃವದ ಮಾದರಿಯನ್ನು ಪಡೆಯಲಾಗಿದ್ದು, ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಇದೀಗ ಇಬ್ಬರಿಗೆ ಕೊರೊನಾ ದೃಢವಾಗಿದೆ. ಯಲ್ಲಾಪುರದಲ್ಲಿ ಇಬ್ಬರಿಗೆ ಕರೊನಾ ದೃಢವಾಗಿದನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೊರೊನಾ ಸೊಂಕಿಗೆ ಒಳಗಾದ ಚಾಲಕ ಯಲ್ಲಾಪುರದ ನೂತನ ನಗರದವರು. ಅವರ ವಯಸ್ಸು 27.
ಕೊರೊನಾ ಸೊಂಕಿನಿoದ ಬಳಲುತ್ತಿರುವ ಗರ್ಭಿಣಿ ಕಿರವತ್ತಿ ಭಾಗದವರಾಗಿದ್ದಾರೆ. ಅವರ ವಯಸ್ಸು 26. ಕೊರೊನಾ ಸೊಂಕಿತರ ಎಲ್ಲಿ ಹೋಗಿದ್ದರು? ಯಾರಿಂದ ಅವರಿಗೆ ಸೊಂಕು ಹರಡಿದ್ದು, ಮತ್ತೆ ಯಾರಿಗೆ ಹರಡಿರುವ ಸಾಧ್ಯತೆಯಿದೆ? ಎನ್ನುವ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ. ಕೊರೊನಾ ಸೊಂಕು ಹೊಂದಿದವರ ಒಡನಾಡಿಗಳ ಆರೋಗ್ಯ ತಪಾಸಣೆಯೂ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಜನರ ಗಂಟಲ ದೃವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಆ ಎಲ್ಲಾ ವರದಿ ಬರುವುದು ಇನ್ನೂ ಬಾಕಿಯಿದೆ.
ಇನ್ನೂ ಮಾನವನ ದೇಹದಲ್ಲಿ ರೊಗ ನಿರೋಧಕ ಶಕ್ತಿ ಮೊದಲಿಗಿಂತಲೂ ಹೆಚ್ಚಿದ್ದು, ಕೊರೊನಾ ಮೂರನೇ ಅಲೆ ಅಷ್ಟು ಶಕ್ತಿಶಾಲಿಯಾಗಿಲ್ಲ. ಹೀಗಾಗಿ ಜನ ಮೊದಲಿನಿಂತೆ ಭಯಪಡುವ ಅಗತ್ಯವಿಲ್ಲ. ಆದರೂ, ಕೋವಿಡ್ ಹರಡದಂತೆ ಎಚ್ಚರವಹಿಸುವುದು ಅತಿಮುಖ್ಯ.