ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೇ 30ರಂದು ಗರಿಷ್ಟ 64.4ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಭಟ್ಕಳ ಭಾಗದಲ್ಲಿ 115.5ಮಿಲಿ ಮೀಟರ್’ವರೆಗೂ ಮಳೆಯಾಗುವ ಬಗ್ಗೆ ಅಂದಾಜಿಸಲಾಗಿದೆ.
ಮಲೆನಾಡು ಪ್ರದೇಶದಲ್ಲಿ ಸಾದಾರಣ ಮಳೆ ಮುಂದುವರೆಯಲಿದ್ದು, ಗರಿಷ್ಟ 15.5ಮಿಲಿ ಮೀಟರ್’ವರೆಗೆ ಮಳೆ ಬರುವ ಲಕ್ಷಣಗಳಿದೆ. ಅದಾದ ನಂತರ ಮುಂದಿನ ಎರಡು ದಿನಗಳವರೆಗೆ ಮಳೆ ಪ್ರಮಾಣ ಕಡಿಮೆಯಾಗುವ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಬೋತ್ಸವ ಜರುಗಲಿದೆ. ಹೀಗಾಗಿ ಸದ್ಯದ ಮಾಹಿತಿ ಪ್ರಕಾರ ಶುಕ್ರವಾರ ಶಾಲೆಗಳಿಗೆ ರಜೆ ಕೊಡಲಾಗಿಲ್ಲ. ಮೇ 28ರಿಂದ 29ರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 67.7 ಮಿಮೀ ಮಿಲಿ ಮೀಟರ್ ಮಳೆ ಸುರಿದಿದೆ.
ಭಟ್ಕಳದಲ್ಲಿ 114.2, ಹಳಿಯಾಳ 2.6 ಹೊನ್ನಾವರ 98.6, ಕಾರವಾರ 58.2, ಕುಮಟಾ 71.5, ಮುಂಡಗೋಡ 6.2, ಸಿದ್ದಾಪುರ 46.3, ಶಿರಸಿ 25.5, ಸೂಪಾ 7.2 ಯಲ್ಲಾಪುರ 13.9 ದಾಂಡೇಲಿಯಲ್ಲಿ 2.5 ಮಿಲಿ ಮೀಟರ್ ಮಳೆ ಸುರಿದಿದೆ. ಈ ಮಳೆಯಿಂದ 11 ಮನೆಗಳಿಗೆ ಹಾನಿಯಾಗಿದೆ.
