ಗೋಕರ್ಣದ ವೇದಿಕಾ ವಿಲೇಜ್ ಹೋಂ ಸ್ಟೇ ಎದುರಿನ ರಸ್ತೆಯಲ್ಲಿ ಗಾಂಜಾ ಸೇದುತ್ತಿದ್ದ ಗಾಂಧಿ ಗೌಡ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಗೋಕರ್ಣ ರುದ್ರಪಾದ ಬಳಿಯ ಬೆಳಗದ್ದೆಯ ಗಾಂಧಿ ಗೌಡ ತಮ್ಮ 30ನೇ ವಯಸ್ಸಿನಲ್ಲಿಯೇ ವ್ಯಸನಕ್ಕೆ ಒಳಗಾಗಿದ್ದಾರೆ. ವಿಪರೀತ ಪ್ರಮಾಣದಲ್ಲಿ ಗಾಂಜಾ ಸೇವಿಸಿ ಅಲೆದಾಡುತ್ತಿದ್ದ ಅವರನ್ನು ಪಿಎಸ್‌ಐ ಖಾದರ್ ಭಾಷಾ ವಿಚಾರಿಸಿದ್ದಾರೆ. ಅದಾದ ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ಗಾಂಧಿ ಗೌಡ ಗಾಂಜಾ ಸೇವಿಸಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಗಾಂಜಾ ಸೇದಿದಲ್ಲದೇ, ಅನುಚಿತವಾಗಿ ವರ್ತಿಸಿದ ಕಾರಣ ಪೊಲೀಸರು ಗಾಂಧಿ ಗೌಡರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರಿಂದ ಗಾಂಧಿ ಗೌಡ ಕೋರ್ಟು-ಕಚೇರಿ ಅಲೆದಾಟ ಶುರು ಮಾಡಿದ್ದಾರೆ.