ಅಂಕೋಲಾ ಪುರಸಭೆ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗೆ `ನಮ್ಮ ಕ್ಲಿನಿಕ್’ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ವಿವಿಧ ರೋಗಗಳ ಬಗ್ಗೆ ಮಾಹಿತಿ ನೀಡಿ, ಔಷದೋಪಚಾರದ ಕುರಿತು ಅರಿವು ಮೂಡಿಸಿದ್ದಾರೆ.
ಈ ವೇಳೆ ನೂರಕ್ಕೂ ಅಧಿಕ ನೌಕರರು ಉಚಿತವಾಗಿ ಆರೋಗ್ಯ ತಪಾಸಣೆಗೆ ಒಳಗಾದರು. ಅಗತ್ಯವಿದ್ದವರಿಗೆ ಉಚಿತ ಔಷಧವನ್ನು ವಿತರಿಸಲಾಯಿತು.
`ನಮ್ಮ ಕ್ಲಿನಿಕ್ ಮೂಲಕ ಉತ್ತಮ ಸೇವೆ ಸಿಗುತ್ತಿದೆ. ಅನಾರೋಗ್ಯಕ್ಕೆ ಒಳಗಾದ ವೇಳೆ ಸಾರ್ವಜನಿಕರು ಸಮೀಪದ ನಮ್ಮ ಕ್ಲಿನಿಕ್ ಕೇಂದ್ರಕ್ಕೆ ತೆರಳಿ ಚಿಕಿತ್ಸೆಪಡೆಯಬೇಕು’ ಎಂದು ಈ ವೇಳೆ ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರು ನಮ್ಮ ಕ್ಲಿನಿಕ್ ಸೇವೆಯನ್ನು ಶ್ಲಾಘಿಸಿದರು. ಇಲ್ಲಿ ಸಿಗುವ ಗುಣಮಟ್ಟದ ಔಷಧಿಯನ್ನು ಪರಿಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದರು