ಪ್ರಯಾಣಿಕರಿಂದ ಹಣಪಡೆದು ಯೋಗ್ಯ ಸೇವೆ ನೀಡದ ದುರ್ಗಾಂಬಾ ಬಸ್ಸನ್ನು ಸರ್ಕಾರ ವಶಕ್ಕೆಪಡೆದಿದೆ. ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಸೂಚನೆ ಮೇರೆಗೆ ಹೊನ್ನಾವರದ ಸಾರಿಗೆ ಅಧಿಕಾರಿಗಳು ಬಸ್ಸನ್ನು ಜಪ್ತು ಮಾಡಿದ್ದಾರೆ.
2025ರ ಮೇ 20ರಂದು ಶಿರಸಿ ಮೂಲದ ಶೃದ್ಧಾ ಭಟ್ಟ ಅವರು ಅವರ ಸಹೋದರಿ ಮೇಧಾ ಭಟ್ಟ ಅವರ ಜೊತೆ ದುರ್ಗಾಂಬಾ ಬಸ್ಸು ಏರಿದ್ದರು. ಮಳೆ ಕಾರಣ ಬಸ್ಸು ಸೋರುತ್ತಿದ್ದು, ಬಸ್ಸಿನ ಒಳಗೆ ನೀರು ನುಗ್ಗುತ್ತಿತ್ತು. ಈ ಬಗ್ಗೆ ವಿವರಿಸಿದಾಗ ಬಸ್ಸಿನ ಸಿಬ್ಬಂದಿ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದರು. ಶೃದ್ಧಾ ಭಟ್ಟ ಅವರ ಸಹೋದರಿ ಮೇಧಾ ಭಟ್ಟ ಹಾಗೂ ಅವರ 2 ವರ್ಷದ ಮಗು ಸಹ ಈ ಬಸ್ಸಿನಲ್ಲಿ ಹಿಂಸೆ ಅನುಭವಿಸಿದ್ದರು.
ತಮಗಾದ ಕೆಟ್ಟ ಅನುಭವದ ಬಗ್ಗೆ ಶೃದ್ಧಾ ಭಟ್ಟ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದನ್ನು ಗಮನಿಸಿದ ಪೊಲೀಸರು ಕಠಿಣ ಕ್ರಮ ಜರುಗಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರನ್ವಯ ಹೊನ್ನವರದ ಸಾರಿಗೆ ಅಧಿಕಾರಿಗಳು ಆ ಬಸ್ಸನ್ನು ವಶಕ್ಕೆಪಡೆದಿದ್ದಾರೆ.
ಇದನ್ನು ಓದಿ: ಡಕೋಟಾ ಎಕ್ಸಪ್ರೆಸ್ ಬಸ್ಸು.. ದುರ್ಗಾಂಬೆಗೆ ನೋಟಿಸ್ಸು!
ಅದಾದ ನಂತರ ಪೊಲೀಸ್ ಅಧೀಕ್ಷಕರಿಗೆ ಹೊನ್ನಾವರದ ಸಾರಿಗೆ ಅಧಿಕಾರಿಗಳು ಬಸ್ಸು ವಶಕ್ಕೆಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ದುರ್ಗಾಂಬಾ ಬಸ್ಸಿನ ವಿರುದ್ಧ ಈ ಹಿಂದೆ ಸಾಕಷ್ಟು ದೂರುಗಳಿದ್ದರೂ ಅದನ್ನು ಯಾವ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪ್ರಭಾವಿಗಳ ಪ್ರಭಾವದಿಂದ ಬಸ್ಸಿನ ಮಾಲಕರು ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಂಡ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ಸಿನ ವಿರುದ್ಧ ಆಕ್ರೋಶವ್ಯಕ್ತವಾಗುತ್ತಲೇ ಕಠಿಣ ಕ್ರಮವಾಗಿದೆ.