ಜೊಯಿಡಾ-ದಾಂಡೇಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಜಿಂಕೆಗೆ ಕಾರು ಗುದ್ದಿದೆ. ಪರಿಣಾಮ ಆ ಚಿಂಕೆ ರಸ್ತೆಯಲ್ಲಿಯೇ ಸಾವನಪ್ಪಿದೆ.
ದಟ್ಟ ಅರಣ್ಯದಿಂದ ಕೂಡಿದ ಜೊಯಿಡಾ-ದಾಂಡೇಲಿ ಕಾಡು ಸೀಳಿಕೊಂಡು ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಆಗಾಗ ವನ್ಯಜೀವಿಗಳ ಅಪಘಾತ ನಡೆಯುತ್ತಿದೆ. ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನದಲ್ಲಿ ನಿಧಾನವಾಗಿ ಚಲಿಸುವಂತೆ ಜಾಗೃತಿ ಫಲಕ ಅಳವಡಿಸಲಾಗಿದೆ. ವನ್ಯಜೀವಿಗಳಿಗೆ ವಾಹನ ಅಪಘಾತ ನಡೆದರೆ ಅದಕ್ಕೆ ವಿಧಿಸಬಹುದಾದ ಶಿಕ್ಷೆಯ ಬಗ್ಗೆಯೂ ಆ ಭಾಗದಲ್ಲಿ ನಾಮಫಲಕಗಳಿವೆ.
ಅದಾಗಿಯೂ ಅನೇಕರು ವೇಗವಾಗಿ ಇಲ್ಲಿ ವಾಹನ ಓಡಿಸುತ್ತಾರೆ. ರಾತ್ರಿ ವೇಳೆ ಬೇಕಾಬಿಟ್ಟಿ ಗಾಡಿ ಓಡಿಸುವವರ ಸಂಖ್ಯೆ ಈ ಭಾಗದಲ್ಲಿ ಹೆಚ್ಚಿದೆ. ಜೂನ್ 3ರ ಮಧ್ಯಾಹ್ನ 3 ಗಂಟೆ ಆಸುಪಾಸಿನಲ್ಲಿ ಸಹ ಜಿಂಕೆಯೊoದು ರಸ್ತೆ ದಾಡುವಾಗ ಅಪರಿಚಿತ ಕಾರು ಆಗಮಿಸಿದೆ. ವೇಗವಾಗಿ ಬಂದ ಕಾರು ರಸ್ತೆ ಅಂಚಿನಲ್ಲಿದ್ದ ಜಿಂಕೆಗೆ ಡಿಕ್ಕಿಯಾಗಿದೆ. ಪರಿಣಾಮ ಜಿಂಕೆ ಅಲ್ಲಿಯೇ ತನ್ನ ಜೀವ ಬಿಟ್ಟಿದೆ.