ಗುಡ್ಡಗಾಡು ಜಿಲ್ಲೆಯ ಭೂ ಕುಸಿತ ತಡೆಗಾಗಿ ಸರ್ಕಾರ ಮೊಬೈಲ್ ಆಫ್ ಅಭಿವೃದ್ಧಿಪಡಿಸಿದೆ. ಈ ಆಫ್ ಬಳಕೆಯ ಬಗ್ಗೆ ಬುಧವಾರ ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರವೂ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಎಸ್‌ಐ. ಸಂಸ್ಥೆಯಿoದ ಈಗಾಗಲೇ 439 ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳ ಬಗ್ಗೆ ಎಲ್ಲಾ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಸರ್ಕಾರ ನೀಡಿದೆ. ಕುಸಿತ ಸ್ಥಳಗಳ ಬಗ್ಗೆ ನಿಗಾ ವಹಿಸಲು 220 ಸ್ಪಾಟರ್ ಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ಎರಡು ಸುತ್ತಿನ ತರಬೇತಿ ನೀಡಲಾಗಿದೆ.
`ಗುಡ್ಡ ಕುಸಿತ ಪ್ರದೇಶಗಳಲ್ಲಿ ಕಂಡು ಬರುವ ಬದಲಾವಣೆಗಳನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುಡ್ಡ ಕುಸಿತದಿಂದಾಗುವ ಅನಾಹುತಗಳನ್ನು ತಡೆಯಲು ಸಾಧ್ಯವಿದೆ’ ಎಂದು ಜಿಎಸ್‌ಐ’ನ ತಾಂತ್ರಿಕ ಅಧಿಕಾರಿ ಮಧುಸೂದನ್ ಅವರು ಅಭಿಪ್ರಾಯಹಂಚಿಕೊoಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಭೂ ಕುಸಿತ ಪ್ರದೇಶಗಳ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಸ್ಪಾಟರ್ಸ್ ಜೊತೆ ಆನ್‌ಲೈನ್ ಮೂಲಕ ಮಾತನಾಡಿದ ಅವರು ಆಫ್ ಬಳಕೆ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ.
`ಭೂ ಕುಸಿತಕ್ಕೆ ಮಳೆಯೇ ಪ್ರಮುಖ ಕಾರಣ. ಭೂಕುಸಿತಕ್ಕೆ ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತ ಅವೈಜ್ಞಾನಿಕ ನಿರ್ಮಾಣ ಚಟುವಟಿಕೆಯೂ ಕಾರಣ. ಕಡಿಮೆ ಸಮಯದಲ್ಲಿ ಸತತವಾಗಿ ಬೀಳುವ ಹೆಚ್ಚಿನ ಮಳೆಯಿಂದ ಮಣ್ಣಿನ ಸವಕಳಿ ಉಂಟಾಗಿ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳು ಹೆಚ್ಚಾಗಿ ಉಂಟಾಗುತ್ತಿದೆ’ ಎಂದವರು ಮಾಹಿತಿ ನೀಡಿದರು. `ಎತ್ತರ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದಿದ್ದರೆ ಆ ನೀರು ಅಲ್ಲಿಯೇ ಸಂಗ್ರಹವಾಗುತ್ತದೆ. ಅದು ಸಹ ಕುಸಿತಕ್ಕೆ ಕಾರಣವಾಗುತ್ತದೆ. ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕೊರೆದು ರಸ್ತೆ – ಮನೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಸಂಭವಿಸಲಿದೆ. ಸ್ಪಾರ‍್ಸ್ ಗಳು ಭೂಕುಸಿತದ ಪ್ರದೇಶದಲ್ಲಿ ಬಿರುಕಿನ ಲಕ್ಷಣಗಳು ಕಂಡು ಬಂದ ಸಮಯದಲ್ಲಿ ಕೂಡಲೇ ಈ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು. ರಸ್ತೆಗಳಲ್ಲಿ ಬಿರುಕುಗಳು ಕಂಡುಬoದಲ್ಲಿ ಹೆದ್ದಾರಿ, ಲೋಕೋಪಯೋಗಿ ಇಲಾಖೆಗಳಿಗೆ ಮಾಹಿತಿಯನ್ನು ನೀಡಬೇಕು’ ಎಂದವರು ತರಬೇತಿಯಲ್ಲಿ ವಿವರಿಸಿದ್ದಾರೆ.
`ಭೂಕುಸಿತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂಚೂಣಿಯಾಗಿ ಮಾಡಿಕೊಂಡಿದ್ದಲ್ಲಿ ಮಾನವ ಜೀವ ಹಾನಿ ಹಾಗು ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ತಡೆಯಬಹುದು. ಭೂ ಕುಸಿತ ಪ್ರದೇಶದ ಗುಡ್ಡ-ಬೆಟ್ಟಗಳ ಬಳಿ ನಿಂತು ಸಾರ್ವಜನಿಕರು ಫೋಟೋ, ವಿಡೀಯೋಗಳನ್ನು ತೆಗೆದುಕೊಳ್ಳಬಾರದು. ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ನೇಮಕ ಮಾಡಿರುವ ಸ್ಪಾಟರ್ ಗಳು ಸಾರ್ವಜನಿಕರ ಹಿತದೃಷ್ಠಿಯ ಜೊತೆಗೆ ತಮ್ಮ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಅವರು ಸೂಚಿಸಿದ್ದಾರೆ.
`ಮಳೆಗಾಲ ಆರಂಭಕ್ಕೂ ಮುನ್ನವೇ ಭೂಕುಸಿತದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಭೂಕುಸಿತದ ಅಪಾಯಗಳ ಬಗ್ಗೆ ಮನವರಿಕೆ ಮಾಡಬೇಕು. ಭೂ ಕುಸಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿPಕರು ಎಚ್ಚರಿಕೆಯಿಂದ ಇರಬೇಕು. ಗುಡ್ಡ ಕುಸಿತದ ಅಪಾಯದ ಬಗ್ಗೆ ಸೂಚನೆಗಳು ಬಂದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ.