ಮಾನವ ಹಕ್ಕುಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಡಬ್ಲುಎಚ್‌ಆರ್ ಆರ್ ಕೆ ಪೌಂಡೇಶನ್ ಯಲ್ಲಾಪುರದಲ್ಲಿ ಸಭೆ ನಡೆಸಿದ್ದು, ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದೆ.
ಈ ಸಭೆಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆಯೂ ಆಗಿರುವ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಮಹಿಳಾ ಅಧ್ಯಕ್ಷೆ ಅರ್ಚನಾ ನಾಯಕ ಅವರು ಆಗಮಿಸಿ ಮಾರ್ಗದರ್ಶನ ಮಾಡಿದ್ದಾರೆ. `ಮಾನವ ಹಕ್ಕು ಉಲ್ಲಂಘನೆ, ಅಕ್ರಮ-ಅವ್ಯವಹಾರ ಸೇರಿ ಭ್ರಷ್ಟಾಚಾರದ ವಿರುದ್ಧವೂ ನಮ್ಮ ಸಂಘಟನೆ ಶ್ರಮಿಸುತ್ತಿದೆ. ಯಾರಿಗೆ ಅನ್ಯಾಯವಾದರೂ ಅವರಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸುತ್ತದೆ’ ಎಂದು ಅರ್ಚನಾ ನಾಯಕ ಅವರು ಈ ಸಭೆಯಲ್ಲಿ ಹೇಳಿದರು. 10 ಜನ ನೂತನ ಸದಸ್ಯರು ಸಂಘಟನೆಗೆ ಸೇರಿದ್ದು, ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಬಗ್ಗೆ ಚರ್ಚೆ ನಡೆಯಿತು.
ಸಂಘಟನೆಯ ಯಲ್ಲಾಪುರ ಘಟಕದ ಅಧ್ಯಕ್ಷೆ ನ್ಯಾಯವಾದಿ ಬೀಬೀ ಅಮೀನಾ ಶೇಖ ಅವರು ಮಾತನಾಡಿ, `ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲಿಯೂ ಪ್ರತಿನಿಧಿಗಳನ್ನು ಮಾಡಿ ಸಂಘಟನೆಯನ್ನು ಬಲಪಡಿಸಲಾಗುತ್ತದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಚೌಕಟ್ಟಿನ ಅಡಿ ನ್ಯಾಯ ಕೊಡಿಸಲಾಗುತ್ತದೆ’ ಎಂದು ಹೇಳಿದರು. ಕೆಲವೇ ದಿನದಲ್ಲಿ ಕಿರವತ್ತಿಯಲ್ಲಿ ಕಾನೂನು ಕಾರ್ಯಾಗಾರ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಟಿ ಪಿ ಆಯಿಷಾ ಸ್ವಾಗತಿಸಿದ್ದು, ಶೀಲಾ ಮರಾಠಿ ವಂದಿಸಿದರು.