ಕಾರವಾರದ ಸಾಯಿ ಮಂದಿರದ ಒಳಗೆ ಬೂಟು ಧರಿಸಿ ಓಡಾಡಿದಲ್ಲದೇ ಅಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದ ಕಳ್ಳರು ಇದೀಗ ಸಿಕ್ಕಿ ಬಿದ್ದಿದ್ದಾರೆ.
ಕಾರವಾರದಕೋಡಿಬಾಗದ ಸಾಯಿ ಮಂದಿರದಲ್ಲಿ ಏಪ್ರಿಲ್ 24ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದರೂ ಕಳ್ಳರು ಸಿಕ್ಕಿ ಬಿದ್ದಿರಲಿಲ್ಲ. ಆದರೂ, ಪೊಲೀಸರು ತಮ್ಮ ಪ್ರಯತ್ನ ಬಿಟ್ಟಿರಲಿಲ್ಲ.
ಕಳ್ಳರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ದೆಹಲಿಯ ತ್ರಿಲೊಕ ಸಿಂಗ್, ಉತ್ತರಖಾಂಡದ ರೇಸಮ್ ಸಿಂಗ್ ಹಾಗೂ ಕುಲವಂತ ಸಿಂಗ್ ಎಂಬಾತರ ಮೇಲೆ ಅನುಮಾನ ಮೂಡಿತು. ಅವರ ಶೋಧ ನಡೆಸಿದಾಗ ಕಳ್ಳರು ಸಿಕ್ಕಿ ಬಿದ್ದರು. ಸಾಯಿಬಾಬಾ ಮೂರ್ತಿ ಸುತ್ತಲಿನ ಆಭರಣ ದೋಚಿರುವುದನ್ನು ಅವರು ಒಪ್ಪಿಕೊಂಡರು.
ಕೆಜಿಗಟ್ಟಲೆ ತೂಕದ ಬೆಳ್ಳಿ ಆಭರಣವನ್ನು ಆ ಕಳ್ಳರು ಗೋವಾದಲ್ಲಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ ಆಭರಣವನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದಾರೆ.