ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿರುವ ಪ್ರಮೋದ ಹೆಗಡೆ ಅವರು ಯಲ್ಲಾಪುರದ ನಿಸರ್ಗಮನೆಯಲ್ಲಿ `ಹಳ್ಳಿಯ ಚಿತ್ರಕಥೆ’ ಎಂಬ ವಾತಾವರಣ ಸೃಷ್ಟಿಸಲು ಸಜ್ಜಾಗಿದ್ದಾರೆ. ಆ ಮೂಲಕ ಗ್ರಾಮ ಸರ್ಕಾರ, ಹಳ್ಳಿ ಬದುಕು, ದೂರು-ದುಮ್ಮಾನ ಹಾಗೂ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಆಡಳಿತ ಕಲ್ಪನೆಯ ಬಗ್ಗೆ ಅವರು ಜನರಿಗೆ ಮಾಹಿತಿ ನೀಡಲು ಚಿಂತಿಸಿದ್ದಾರೆ.
ಪoಚಾಯತ ರಾಜ್ ಪರಿಷತ್, ಗ್ರಾ ಪಂ ಸದಸ್ಯರ ಒಕ್ಕೂಟ ಹಾಗೂ ಟೀಡ್ ಸಹಯೋಗದಲ್ಲಿ ಜೂನ್ 10ರಂದು ಈ ಪರಿಕಲ್ಪನೆಯ ಪ್ರಯೋಗ ನಡೆಯಲಿದೆ. ಅನೇಕ ವಿದ್ವಾಂಸರಿAದ ವಿಶೇಷ ಉಪನ್ಯಾಸ, ಗ್ರಾಮಸಭೆ, ಗಾಂಧೀ ಪರ್ಣಕುಟಿರದ ಕಲ್ಪನೆ, ಜನರ ಪಂಚಾಯ್ತಿ, ಪ್ರಜಾಪ್ರಭುತ್ವ ವ್ಯವಸ್ಥೆ ವಿಷಯವಾಗಿ ಈ ದಿನ ಚರ್ಚೆ-ಸಂವಾದ ನಡೆಯಲಿದೆ.
ಪ್ರಮೋದ ಹೆಗಡೆ ಅವರು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಮಾಡಿದ್ದೇನು? ಮುಂದೆ ಮಾಡಲು ಉದ್ದೇಶಿಸಿದ್ದು ಏನು? ಗ್ರಾಮೀಣ ಅಭಿವೃದ್ಧಿಗಾಗಿ ಅವರ ಯೋಜನೆಗಳಾವವು? ಎಂಬ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಸಿಗಲಿದೆ. ವಿಶೇಷವಾಗಿ ಗಾಂಧಿ ಟ್ರಸ್ಟಿನ ಉಪಾಧ್ಯಕ್ಷ ಶಿವರಾಜ ಅವರು ಸತ್ಯ, ಅಹಿಂಸೆ ಕುರಿತು ಮಾತನಾಡಲಿದ್ದಾರೆ. ಮಾಜಿ ಸಂಸದ ನಾರಾಯಣ ಸ್ವಾಮಿ, ಮಾಜಿ ಶಾಸಕ ಡಿ ಆರ್ ಪಾಟೀಲ, ಟೀಡ್ ಸಂಸ್ಥೆಯ ಮೋಹಿನಿ ಪೂಜಾರ್, ಗ್ರಾ ಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕರ್ನಾಟಕ ಪಂಚಾಯತ ರಾಜ್ ಪರಿಷತ್ ಆಯೋಜನೆಯ ಅಡಿ ಪ್ರಮೋದ ಹೆಗಡೆ ಅವರು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಯಲ್ಲಾಪುರದಿಂದ ಬಸ್ ವ್ಯವಸ್ಥೆ ಮಾಡಿದ್ದಾರೆ. ಎಲ್ಲರಿಗೂ ಮಧ್ಯಾಹ್ನ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಜೂನ್ 10ರಂದುಬೆಳಗ್ಗೆ 10.30ರಿಂದ ಕಾರ್ಯಕ್ರಮ ಶುರುವಾಗಲಿದೆ. ಯಲ್ಲಾಪುರದಿಂದ ನಿಸರ್ಗಮನೆಯವರೆಗೆ ಪ್ರತಿ 5 ನಿಮಿಷಕ್ಕೆ ಒಮ್ಮೆ ಮಿನಿ ಬಸ್ ಓಡಾಡಲಿದೆ. ಸಂಕಲ್ಪದ ಬಳಿ ಬಂದವರನ್ನು ಆ ವಾಹನ ನಿಸರ್ಗಮನೆಯ ಕಾರ್ಯಾಗಾರಕ್ಕೆ ಕರೆದೊಯ್ಯಲಿದೆ. ಶುಕ್ರವಾರ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾಹಿತಿ ಹಂಚಿಕೊoಡರು.
ಇನ್ಯಾವುದೇ ಗೊಂದಲ ಇದ್ದರೆ ಪ್ರಮೋದ ಹೆಗಡೆ ಅವರಿಗೆ ಫೋನ್ ಮಾಡಿ.. ಮಾತನಾಡಿ: 9448408598