ಮುಂಡಗೋಡು ಪಟ್ಟಣದಲ್ಲಿ ರಾತ್ರಿ ವೇಳೆ ಅಡ್ಡಾಡ್ಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದ್ದು, ಆತನಿಂದ ಮುಚ್ಚಳಿಕೆಪಡೆದು ಮನೆಗೆ ಕಳುಹಿಸಿದ್ದಾರೆ.
ಮುಂಡಗೋಡು ಇಂದಿರಾನಗರ ಕೊಪ್ಪದ ಬಳಿ ಫಕ್ಕಿರೇಶ ದೊಡ್ಡಮನಿ ಎಂಬಾತರು ವಾಸವಾಗಿದ್ದು, ಹಗಲಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ವೇಳೆ ಅಲ್ಲಿ-ಇಲ್ಲಿ ಓಡಾಡುವುದನ್ನು ಅವರು ಚಟವಾಗಿಸಿಕೊಂಡಿದ್ದರು. ರಾತ್ರಿ 1 ಗಂಟೆ ಅವಧಿಯಲ್ಲಿ ಸಹ ಅವರು ರಸ್ತೆಯ ಮೇಲೆ ಓಡಾಡುತ್ತಿದ್ದು, ಇದರಿಂದ ಅನೇಕರು ಭಯಗೊಂಡಿದ್ದರು.
ಈ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದ್ದು, ಜೂ 7ರ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಫಕ್ಕಿರೇಶ ದೊಡ್ಡಮನಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಫಕ್ಕಿರೇಶ ದೊಡ್ಡಮನಿ ಆರೋಪಿಯಾಗಿದ್ದರಿಂದ ಈ ಓಡಾಟದ ವಿಷಯವನ್ನು ಅವರು ಗಂಭೀರವಾಗಿ ಪರಿಗಣಿಸಿದರು.
ಫಕ್ಕಿರೇಶ ಅವರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡು, ಕೊನೆಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.