ಹೊನ್ನಾವರದ ಸಾಂತಾ ಫರ್ನಾಂಡಿಸ್ ಅವರು ತಮ್ಮ 32ನೇ ವಯಸ್ಸಿನಲ್ಲಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದೇ ಅವರ ಆತ್ಮಹತ್ಯೆಗೆ ಕಾರಣ.
ಕೂಲಿ ಕೆಲಸ ಮಾಡಿಕೊಂಡಿದ್ದ ಸಾಂತಾ ಫರ್ನಾಂಡಿಸ್ ಅವರು ಕೆಲ ದಿನಗಳಿಂದ ಮಂಕಾಗಿದ್ದರು. ಮನಸ್ಸಿಗೆ ಬೇಸರವಾದ ಕಾರಣ ಅವರು ಮನೆ ಮುಂದಿನ ಬಾವಿಗೆ ಹಾರದರು. ಪರಿಣಾಮ ಅವರ ತಲೆ, ಕೈ-ಕಾಲುಗಳಿಗೆ ಗಾಯವಾಯಿತು. ಬಾವಿಯ ಒಳಗೆ ಕೊನೆ ಉಸಿರೆಳೆದರು.
ನೇಣಿಗೆ ಶರಣಾದ ಕಟ್ಟಡ ಕಾರ್ಮಿಕ
ಕುಮಟಾ ನಾಡುಮಾಸ್ಕೇರಿಯ ಅನಿಲಕುಮಾರ ಸಾಲಿಯಾನ ಅವರು ತಮ್ಮ 38 ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ.
ಗೌಂಡಿ ಕೆಲಸ ಮಾಡಿಕೊಂಡಿದ್ದ ಅವರಿಗೆ ದೊಡ್ಡ ಸಮಸ್ಯೆ ಏನೂ ಇರಲಿಲ್ಲ. ಅದಾಗಿಯೂ ಬೇಸರದಿಂದ ಇರುತ್ತಿದ್ದ ಅವರು ಜೀವನದಲ್ಲಿ ಜಿಗುಪ್ಸೆಹೊಂದಿದ್ದರು. ಇದೇ ಕಾರಣದಿಂದ ಮನೆಯ ಕೋಣೆಗೆ ಹೋಗಿ, ಅಲ್ಲಿನ ಜಂತಿಗೆ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ.