6

ಕಾರವಾರ-ಅಂಕೋಲಾ: ಬಾಳಿ ಬದುಕಬೇಕಿದ್ದ ಮಕ್ಕಳಿಂದ ಬದುಕಿಗೆ ವಿದಾಯ!

ಅನಾರೋಗ್ಯದಿಂದ  ಬಳಲುತ್ತಿದ್ದ ಮಕ್ಕಳಿಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ. ಕಾರವಾರದ ಶ್ರೇಯಸ್ ಬೇವಿನಕಟ್ಟೆ ಹಾಗೂ ಅಂಕೋಲಾದ ಪ್ರಗತಿ ಖಾರ್ವಿ ಸಾವನಪ್ಪಿದ ಚಿಣ್ಣರು.

ಅಂಕೋಲಾದ ಬೆಳಂಬಾರದ ಪ್ರಗತಿ ಖಾರ್ವಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ವಿವಿಧ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಳಿ ಬದುಕಬೇಕಿದ್ದ ಬಾಲಕಿ ಪ್ರಾಣ ಬಿಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ಆಗದ ನೋವು ಪಾಲಕರನ್ನು ಕಾಡುತ್ತಿತ್ತು.

ಕಾರವಾರ ನಗರದ ಬಜಾರ್ ಕರ್ನಾಟಕ ಪಬ್ಲಿಕ್ ಶಾಲೆಯ ಯುಕೆಜಿ ವಿದ್ಯಾರ್ಥಿ ಶ್ರೇಯಸ್ ಬೇವಿನಕಟ್ಟಿ ಸಹ ತಮ್ಮ 5ನೇ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ ಮೂಲಕ ಶ್ರೇಯಸ್ ಪಾಲಕರು ದುಡಿಮೆಗಾಗಿ ಕಾರವಾರಕ್ಕೆ ಬಂದಿದ್ದರು. ಬಿಣಗಾದ ಗ್ರಾಸಿಂ ಇಂಡಸ್ಟಿçÃಸ್‌ನಲ್ಲಿ ಶ್ರೇಯಸ್ ಅವರ ತಂದೆ ಕಾರ್ಮಿಕರಾಗಿದ್ದರು. ಎಲ್‌ಕೆಜಿ ಮುಗಿದ ಬೇಸಿಗೆ ರಜೆಯಲ್ಲಿ ಹುಬ್ಬಳ್ಳಿಗೆ ಹೋಗಿದ್ದ ಶ್ರೇಯಸ್ ಯುಕೆಜಿ ಪ್ರವೇಶಕ್ಕೆ ಸಿದ್ಧವಾಗಿದ್ದರು.

ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿರುವಾಗ ಶ್ರೇಯಸ್ ಅವರಿಗೆ ಅನಾರೋಗ್ಯ ಕಾಡಿತು. ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಸಹ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಅದು ಸಿಗದ ಕಾರಣ ಶ್ರೇಯಸ್ ಕೊನೆ ಉಸಿರೆಳೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page